ಇಸ್ರೇಲ್ ಪ್ರಧಾನಿ ಮಾತಾಡುವಾಗ ಬೈಡೆನ್ ಗೆ ಜೋರು ನಿದ್ದೆ?!

masthmagaa.com:

ಇಸ್ರೇಲ್ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕಾಲೆಳೆದಿದ್ದಾರೆ. ಕಳೆದ ತಿಂಗಳು ಹಾಲಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅಮೆರಿಕ ಪ್ರವಾಸ ಕೈಗೊಂಡಾಗ ಓವಲ್ ಆಫೀಸ್ ನಲ್ಲಿ ಭೇಟಿ ಆಗಿತ್ತು. ಆ ವೇಳೆ ಬೆನೆಟ್ ಮಾತಾಡುವಾಗ ಜೋ ಬೈಡೆನ್ ಕೂತಲ್ಲೇ ಮಲಗಿ ನಿದ್ದೆ ಮಾಡ್ತಿದ್ರು ಅಂತ ಹೇಳಿದ್ದಾರೆ. ತಲೆಯನ್ನ ಕೆಳಗೆ ಮಾಡಿ ತೋರಿಸಿ ಬೈಡೆನ್ ಗೆ ಕಿಚಾಯಿಸಿದ್ದಾರೆ. ಈ ಹಿಂದೆ ಕೂಡಾ ಈ ಮೀಟಿಂಗ್’ನ ಈ ದೃಶ್ಯಗಳು ವೈರಲ್ ಆಗಿದ್ವು. ಆದ್ರೆ ಆಮೇಲೆ ವೈಟ್ ಹೌಸ್ ಫುಲ್ ಕ್ಲಿಪ್ ಬಿಡುಗಡೆ ಮಾಡಿ, ಬೈಡೆನ್ ಇಸ್ರೇಲಿ ಪ್ರಧಾನಿಯ ಮಾತಿಗೆ ರಿಯಾಕ್ಟ್ ಮಾಡಿದ್ದರು ಅಂತ ತೊರಿಸಿತ್ತು. ಕೇವಲ ಕೆಲ ಸೆಕೆಂಡ್ ಕಾಲ ತಲೆ ಕೆಳಗೆ ಮಾಡಿ ಬೆನೆಟ್ ಮಾತಿನ ಕಡೆ ಗಮನ ಕೊಟ್ಟಿರೋದು ಅದು. ನಿದ್ದೆ ಮಾಡಿದ್ದು ಅಲ್ಲ ಅಂತ ಬೈಡೆನ್ ಕ್ಯಾಂಪ್ ಸಮರ್ಥಿಸಿಕೊಂಡಿತ್ತು. ಆದ್ರೂ ನೆತನ್ಯಾಹುಗೆ ಬೈಡೆನ್ ಮೇಲೆ ಸಿಟ್ಟು ಹೋಗಿಲ್ಲ. ಯಾಕಂದ್ರೆ ಬೈಡೆನ್’ಗೂ ನೆತನ್ಯಾಹುಗೂ ಆಗಿ ಬರಲ್ಲ. ಟ್ರಂಪ್ ಇದ್ದಾಗ ನೆತನ್ಯಾಹು ಜೊತೆ ಒಳ್ಳೆ ಸಂಬಂಧ ಇಟ್ಟುಕೊಂಡಿದ್ರು. ಆದ್ರೆ ಬೈಡೆನ್ ಬರ್ತಿದ್ದಂತೆ ಅಮೆರಿಕದ ಮಿಡಲ್ ಈಸ್ಟ್ ಪಾಲಿಸಿಯೇ ಚೇಂಜ್ ಆಯ್ತು. ಇಲ್ಲಿ ಇವರಿಬ್ಬರ ಪಕ್ಷ ಹಾಗೂ ವೈಯಕ್ತಿಕ ರಾಜಕೀಯ ಸಿದ್ದಾಂತಗಳದ್ದೂ ಪಾಲಿದೆ. ನೆತನ್ಯಾಹು ಒಬ್ಬ ಬಲಪಂಥೀಯ ನಾಯಕ, ಅವರ ಲಿಕುಡ್ ಪಕ್ಷವೂ ಬಲಪಂಥೀಯ ಪಕ್ಷ. ಆದ್ರೆ ಅಮೆರಿಕದಲ್ಲಿ ಬೈಡೆನ್ ಒಬ್ಬ ಉದಾರವಾದಿ ನಾಯಕ ಹಾಗೂ ಅವರ ಡೆಮಾಕ್ರಾಟಿಕ್ ಪಕ್ಷವೂ ಉದಾರವಾದಿ ನಿಲುವಿನ ಪಕ್ಷ. ಆದ್ರೆ ಅಂತಾರಾಷ್ಟ್ರೀಯ ಸಂಬಂಧದಲ್ಲಿ ಇವೆಲ್ಲ ರಿಫ್ಲೆಕ್ಟ್ ಆಗಬಾರದು. ಅದು ದೇಶ ದೇಶಗಳ ದೀರ್ಘಾವಧಿ ಸ್ಟ್ರಾಟೆಜಿಕ್ ಪಾಲಿಸಿ ಮೇಲೆ ಹೋಗಬೇಕು. ಆದ್ರೆ ಅಮೆರಿಕದ ಅಧ್ಯಕ್ಷರುಗಳ ವಿಚಾರದಲ್ಲಿ ಹೊಸಬರು ಬಂದ ಹಾಗೂ ಇದು ಸ್ವಲ್ಪ ಚೇಂಜ್ ಆಗುತ್ತೆ.

-masthmagaa.com

Contact Us for Advertisement

Leave a Reply