ಜೋ ಬೈಡನ್‌ಗೆ ಅರಳು ಮರಳು! ಅಮೆರಿಕ ಅಧ್ಯಕ್ಷನ ಮೇಲೆ ಆರೋಪ!

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಅರಳು ಮರಳಿದೆ ಅಂತ ಅಮೆರಿಕದ ಅಧಿಕಾರಿ ಅಫಿಷಿಯಲ್ಲಾಗಿ ಆರೋಪ ಮಾಡಿದ್ದಾರೆ. ಬೈಡನ್‌ ಈ ಹಿಂದೆ 2017ರಲ್ಲಿ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿದ್ದಾಗ ಅಮೆರಿಕದ ಕೆಲ ಸಿಕ್ರೇಟ್‌ ದಾಖಲೆಗಳನ್ನ ದುರುಪಯೋಗ ಮಾಡ್ಕೊಂಡಿದ್ರು. ಈ ದಾಖಲೆಯಲ್ಲಿ ಅಮೆರಿಕದ ಸೇನೆ ಮತ್ತು ಫಾರಿನ್‌ ಪಾಲಿಸಿ ಬಗ್ಗೆ ಕೆಲ ಸಿಕ್ರೇಟ್‌ ವಿಷಯಗಳು ಇದ್ವು. ಅಂತಹ ಸಿಕ್ರೇಟ್‌ ದಾಖಲೆಗಳನ್ನ ಜೋ ಬೈಡನ್‌ ತಮ್ಮ ಮರೆವಿನಿಂದ ಮಿಸ್‌ಪ್ಲೇಸ್‌ ಮಾಡಿದ್ದಾರೆ ಅಂತ ರಾಬರ್ಟ್‌ ಹುರ್‌ ಹೇಳಿದ್ದಾರೆ. ಈ ರಾಬರ್ಟ್‌ ಹುರ್‌ ಯಾರು ಅಂದ್ರೆ United States Department of Justiceನಲ್ಲಿ ಸಧ್ಯ ವಿಶೇಷ ವಕೀಲರಾಗಿ ಕೆಲಸ ಮಾಡ್ತಿದ್ದಾರೆ. ಇವರು ಈ ಕುರಿತು ಒಂದು ವರ್ಷಕ್ಕೂ ಹೆಚ್ಚು ಕಾಲ ತನಿಖೆ ನಡೆಸಿದ್ರು. ಇದೀಗ ಫೆಬ್ರುವರಿ 08 ರಂದು ರಿಪೋರ್ಟ್‌ ರಿಲೀಸ್‌ ಮಾಡಿದ್ದಾರೆ. ಈ ರಿಪೋರ್ಟ್‌ನಲ್ಲಿ ಜೋ ಬೈಡನ್‌ ಅವ್ರ ನೆನಪಿನ ಶಕ್ತಿ ಚೆನ್ನಾಗಿಲ್ಲ. ಅವ್ರಿಗೆ ತುಂಬಾ ಕಡಿಮೆ ಮೆಮೊರಿ ಪವರ್‌ ಇದೆ. ಹೀಗಾಗಿ ಸಿಕ್ರೇಟ್‌ ದಾಖಲೆಗಳನ್ನ ಮಿಸ್‌ಪ್ಲೇಸ್‌ ಮಾಡಿದ್ರು ಅಂತ ಜೋ ಬೈಡನ್‌ರನ್ನ ಆರೋಪಿ ಅಂತ ಕರೆಯೋಕೆ ಆಗಲ್ಲ ಅಂತ ರಿಪೋರ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ಬೈಡೆನ್‌ ತಮ್ಮ ಮರೆವಿನಿಂದ ತಮ್ಮ ಜೀವನದ ಇಂಪಾರ್ಟೆಂಟ್‌ ಘಟನೆಗಳನ್ನೇ ಮರೆತಿದ್ದಾರೆ ಅಂತ ಅದರಲ್ಲಿ ಉಲ್ಲೇಖ ಮಾಡಲಾಗಿದೆ. ಈ ಮೂಲಕ ಬೈಡೆನ್‌ರ ಅರಳು ಮರಿಳಿಗೆ ಈಗ ಅಧಿಕೃತ ರೆಕಾರ್ಡ್‌ ಕೂಡ ಸಿಕ್ಕಾಂತಾಗಿದೆ. ಯಾಕಂದ್ರೆ ಬೈಡೆನ್‌ ಈ ಮುಂಚೆಯಿಂದಲೂ ಸ್ಟೇಜ್‌ ಮೇಲೆ ಅಲ್ಲಿ ಇಲ್ಲಿ ಮರೆವಿನ ಸಮಸ್ಯೆ ಇರೋ ರೀತಿ ವರ್ತಿಸಿದ್ರು. ಆದ್ರೆ ಅದು ಆಡಳಿತದ ಮೇಲೆ ಪ್ರಭಾವ ಬೀರಲ್ಲ ಅಂತ ಅವರ ಹೆಂಡ್ತಿ ಹೇಳಿದ್ರು. ನನ್ನ ಗಂಡ ಸ್ಟ್ರಾಂಗ್‌ ಅಂತ ಹೇಳಿದ್ರು ಜಿಲ್‌ ಬೈಡನ್…‌ ಬಟ್‌ ಈಗ ಅವರ ಮರೆವಿನಿಂದ ಸೇನೆ ಮತ್ತು ಅಮೆರಿಕದ ಸೀಕ್ರೆಟ್‌ಗೆ ಸಂಬಂಧಪಟ್ಟಂತೆ ಸಮಸ್ಯೆ ಆಗಿದೆ ಅಂತ ಅಧಿಕಾರಿಯೊಬ್ರು ಮುದ್ರೆ ಒತ್ತಿದ್ದಾರೆ. ಇತ್ತ ಈ ರಿಪೋರ್ಟ್‌ ಹೊರ ಬೀಳ್ತಿದ್ಹಾಗೆ ವೈಟ್‌ ಹೌಸ್‌ ಕೂಡ ರಿಯಾಕ್ಟ್‌ ಮಾಡಿದೆ. ʻಈ ರೀತಿ ಕೆಲವೊಮ್ಮೆ ಜೀವನದ ಕೆಲ ಘಟನೆಗಳು ನೆನಪು ಹೋಗೋದು ಕಾಮನ್‌. ಅದ್ರಲ್ಲಿ ಆಶ್ಚರ್ಯ ಪಡುವಂತ ವಿಷಯ ಏನೂ ಇಲ್ಲ ಅಂತ ಹೇಳಿದೆ. ಈ ಬಗ್ಗೆ ಜೋ ಬೈಡನ್‌ ಕೂಡ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ʻನನಗೆ ವಯಸ್ಸಾಗಿದೆ ಹೌದು…ಆದ್ರೆ ನಾನು ಏನ್‌ ಮಾಡ್ತಿದ್ದೀನಿ ಅಂತ ನನಗೆ ಚೆನ್ನಾಗ್‌ ಗೊತ್ತಿದೆ. ನನ್ನ ನೆನಪಿನ ಶಕ್ತಿಗೆ ಏನೂ ಆಗಿಲ್ಲ. ಎಲ್ಲಾ ಚೆನ್ನಾಗಿದೆ…ನನಗೆ ಯಾರೂ ಉಪದೇಶ ಮಾಡ್ಬೇಕಿಲ್ಲʼ ಅಂತ ಸಿಟ್ಟಿನಿಂದ ಕಿಡಿಕಾರಿದ್ದಾರೆ. ಇನ್ನು ಹೀಗ್‌ ಹೇಳುವಾಗಲೇ ಬೈಡನ್‌ ಮೀಡಿಯಾಗಳ ಹತ್ರ ಮತ್ತೆ ತಮ್ಮ ಮರೆವಿನ ಪ್ರದರ್ಶನ ಮಾಡಿದ್ದಾರೆ. ಇಸ್ರೇಲ್‌-ಹಮಾಸ್‌ ಯುದ್ಧ ವಿಚಾರವಾಗಿ ಮಾತನಾಡುವಾಗ ಒಬ್ರ ಹೆಸ್ರನ್ನ ಮತ್ತೊಬ್ರಿಗೆ ಕರ್ದು…ಪೇಚಿಗೆ ಸಿಲುಕಿದ್ದಾರೆ. ಇಸ್ರೇಲ್‌ ಪ್ರಧಾನಿಯ ಹೆಸರು ಹೇಳ್ಬೇಕಾದ್ರೆ, ಈಜಿಪ್ಟ್‌ ಅಧ್ಯಕ್ಷರ ಹೆಸರು ಹೇಳ್ಬಿಟ್ಟಿದ್ದಾರೆ. ಇದು ಈಗ ಫುಲ್‌ ವೈರಲ್‌ ಆಗಿದೆ.

-masthmagaa.com

Contact Us for Advertisement

Leave a Reply