ಗಾಜಾ ಕದನ ವಿರಾಮ: ನೆತನ್ಯಾಹು ವಿರುದ್ಧ ಜೊ ಬೈಡನ್‌ ಆಕ್ರೋಶ!

masthmagaa.com:

ಇತ್ತೀಚಿಗಷ್ಟೇ ರಂಜಾನ್‌ ಮುನ್ನ ಗಾಜಾ ಕದನ ವಿರಾಮ ಆಗ್ಬೇಕನ್ನೋ ಅಮೆರಿಕ ಅಧ್ಯಕ್ಷ ಜೊ ಬೈಡನ್‌ರ ಹೇಳಿಕೆಯನ್ನ ತಳ್ಳಿ ಹಾಕಿದ್ದ ಇಸ್ರೇಲ್‌ ಪ್ರಧಾನಿ ನೆತನ್ಯಾಹು ದಾಳಿ ಕಂಟಿನ್ಯೂ ಮಾಡೋದಾಗಿ ಹೇಳಿದ್ರು. ಇದೀಗ ಈ ಬಗ್ಗೆ ಬೈಡನ್‌ ರಿಯಾಕ್ಟ್‌ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ದಾಳಿ ಮುಂದುವರೆಸಿ ಇಸ್ರೇಲ್‌ಗೆ ಸಹಾಯ ಮಾಡೋ ಬದಲಿಗೆ ನೋವುಂಟು ಮಾಡ್ತಿದ್ದಾರೆ ಅಂತ ನೆತನ್ಯಾಹು ವಿರುದ್ದ ಕಿಡಿಕಾರಿದ್ದಾರೆ. ಅಲ್ದೇ ದಾಳಿಯಲ್ಲಿ ಮುಗ್ದ ಜೀವಗಳ ಪ್ರಾಣ ಹೋಗ್ತಿರೋ ಬಗ್ಗೆ ನೆತನ್ಯಾಹು ಗಮನ ಹರಿಸ್ಬೇಕು ಅಂತ ಬೈಡನ್‌ ಕಳವಳ ವ್ಯಕ್ತ ಪಡಿಸಿದ್ದಾರೆ. ಇನ್ನೊಂದೆಡೆ ಗಾಜಾ ಯುದ್ದದಲ್ಲಿ ಆಹಾರ ಸೇರಿದಂತೆ ಅಗತ್ಯ ನೆರವು ನೀಡೊ ಸಂಬಂಧ ಅಮೆರಿಕ ಬಿಗ್‌ ಪ್ಲಾನ್‌ ಮಾಡಿದೆ. ಗಾಜಾದಲ್ಲಿ ಸಂತ್ರಸ್ಥರಿಗೆ ಬೇಗನೆ ಹೆಚ್ಚಿನ ನೆರವು ನೀಡೊಕೆ ಅನುಕೂಲವಾಗಲು ಅಮೆರಿಕ ಸೇನೆ ಫ್ಲೋಟಿಂಗ್‌ ಪೋರ್ಟ್‌ ಅಥ್ವಾ ತೇಲುವ ಬಂದರು ನಿರ್ಮಾಣಕ್ಕೆ ಮುಂದಾಗಿದೆ. ಇದನ್ನ ನಿರ್ಮಿಸಲು 2 ತಿಂಗಳು ಟೈಮ್‌ ಬೇಕಾಗುತ್ತೆ. ಹಾಗೂ 1 ಸಾವಿರ ಸೈನಿಕರು ಇದ್ರ ನಿರ್ಮಾಣಕ್ಕೆ ಕೆಲಸ ಮಾಡಲಿದ್ದಾರೆ ಅನ್ನೊ ವಿಚಾರವನ್ನ ಸ್ವತಃ ಪೆಂಟಗನ್‌ ಸ್ಪಷ್ಟ ಪಡಿಸಿದೆ. ಆದ್ರೆ ಇದು ಹಮಾಸ್‌ಗೆ ಸಹಾಯವಾಗುತ್ತೆ ಅಂತೇಳಿ ಅಮೆರಿಕದ ಕೆಲ ರಿಪಬ್ಲಿಕನ್‌ ನಾಯಕರೆ ಬೈಡನ್‌ರ ಈ ಪ್ಲಾನ್‌ಗೆ ವಿರೋಧ ವ್ಯಕ್ತ ಪಡಿಸಿದ್ದಾರೆ ಅಂತ ತಿಳಿದು ಬಂದಿದೆ.

ಇನ್ನು ಗಾಜಾ ಯುದ್ದದ ಪರಿಣಾಮ ಅತ್ತ ಇಸ್ರೇಲ್‌ ಹಾಗೂ ಲೆಬೆನಾನ್‌ನ ಹೆಜ್ಬುಲ್ಲಾಗಳ ಮಧ್ಯೆ ಗಡಿಯಲ್ಲಿ ಸಂಘರ್ಷ ಜೋರಾಗಿದೆ. ಇದೀಗ ಇಸ್ರೇಲ್‌ ದಾಳಿಗೆ ದಕ್ಷಿಣ ಲೆಬೆನಾನ್‌ನಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಹಾಗೂ ದಾಳಿ ವೇಳೆ 9 ಜನ ಗಾಯಗೊಂಡಿದ್ದಾರೆ. ಇನ್ನು ಇಸ್ರೇಲ್‌ ಸೇನೆ ಭಾರಿ ಕ್ಯಾಲಿಬರ್‌ ಬರ್ಕನ್‌ ಮಿಸೈಲ್‌ ಅಂದ್ರೆ ಸುಮಾರು 800 ಕಿಮೀ ರೇಂಜ್‌ ಸಾಮರ್ಥ್ಯದ ಮಿಸೈಲ್‌ಗಳ ಮೂಲಕ ಈ ದಾಳಿ ಮಾಡಿದೆ ಅಂತ ಹೆಜ್ಬುಲ್ಲಾ ಪಡೆ ಹೇಳಿದೆ.

-masthmagaa.com

Contact Us for Advertisement

Leave a Reply