ಯುದ್ಧ ಪೀಡಿತ ಯುಕ್ರೇನ್‌ನಲ್ಲಿ ಅಮೆರಿಕ ಅಧ್ಯಕ್ಷ ಬೈಡೆನ್‌ ಪ್ರತ್ಯಕ್ಷ! ಪುಟಿನ್‌ಗೆ ಬಿಗ್ ವಾರ್ನಿಂಗ್‌

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಯುದ್ದ ಪೀಡಿತ ಯುಕ್ರೇನ್‌ಗೆ ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಭೇಟಿ ಕೊಟ್ಟಿದ್ದಾರೆ. ಯುಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡಿ ಇದೇ ಫೆಬ್ರವರಿ 24ನೇ ತಾರೀಖಿಗೆ ಒಂದು ವರ್ಷ ಪೂರೈಸುತ್ತೆ. ಈ ಹೊತ್ತಲ್ಲೇ ಅಮೆರಿಕ ಅಧ್ಯಕ್ಷರು ದಿಢೀರ್‌ ಅಂತ ಯುಕ್ರೇನ್‌ನಲ್ಲಿ ಪ್ರತ್ಯಕ್ಷರಾಗುವ ಮೂಲಕ ರಷ್ಯಾ ದೊರೆ ಪುಟಿನ್‌ಗೆ ಬಿಗ್‌ ಮೆಸೇಜ್‌ ಕೊಟ್ಟಿದ್ದಾರೆ. ನ್ಯಾಟೋ ದೇಶಗಳ ಸಭೆಗಾಗಿ ಬೈಡೆನ್‌ ಪೊಲೆಂಡ್‌ಗೆ ಭೇಟಿಕೊಡಬೇಕಿತ್ತು. ಆದ್ರೆ ಇದಕ್ಕೂ ಮುಂಚೆಯೇ ಯುಕ್ರೇನ್‌ಗೆ ಸಪ್ರೈಸ್‌ ಎಂಟ್ರಿ ಕೊಟ್ಟಿದ್ದು ರಾಜಧಾನಿ ಕಿಯೇವ್‌ನಲ್ಲಿ ಯುಕ್ರೇನ್‌ ಅಧ್ಯಕ್ಷ ವೊಲಿಡಿಮಿರ್‌ ಝೆಲೆನ್ಸ್ಕಿ ಜೊತೆಗೆ ಹೆಜ್ಜೆಹಾಕಿದ್ದಾರೆ. ಈ ವೇಳೆ ಮಾತನಾಡಿದ ಬೈಡೆನ್‌, ಪುಟಿನ್ ಯುಕ್ರೇನ್ ದುರ್ಬಲವಾಗಿದೆ, ಪಾಶ್ಚಿಮಾತ್ಯ ದೇಶಗಳು ವಿಭಜಿತವಾಗಿದೆ ಅಂತ ಅನ್ಕೊಂಡಿದ್ದಾರೆ. ಅಲ್ದೇ ಪುಟಿನ್ ನಮ್ಮನ್ನು ಮೀರಿಸಿಬಿಡ್ತೀನಿ ಅಂತ ಭಾವಿಸಿದ್ದಾರೆ. ಆದ್ರೆ ಈಗ ಅವರು ಆ ರೀತಿ ಯೋಚನೆ ಮಾಡೋಕೆ ಸಾಧ್ಯವಿಲ್ಲ ಅಂತ ನಾನು ಭಾವಿಸ್ತೀನಿ ಅಂತ ಹೇಳಿದ್ದಾರೆ. ಜೊತೆಗೆ ಯುಕ್ರೇನ್‌ ಸಾರ್ವಭೌಮತೆ, ಪ್ರಾದೇಶಿಕ ಸಮಗ್ರತೆಯನ್ನ ರಕ್ಷಣೆ ಮಾಡೋಕೆ ನಾವು ಯಾವಾಗಲೂ ಸಹಾಯ ಮಾಡ್ತೀವಿ. ಯುಕ್ರೇನ್‌ಗೆ ದೊಡ್ಡ ಮಟ್ಟದಲ್ಲಿ ಇನ್ನೂ ಹೆಚ್ಚಿನ ಶಸ್ತ್ರಾಸ್ತ್ರಗಳನ್ನ ಕೊಡ್ತೀನಿ ಅಂತ ಬೈಡೆನ್ ವಾಗ್ದಾನ ಮಾಡಿದಾರೆ. ಇತ್ತ ಯುಕ್ರೇನ್‌ಗೆ ಬೈಡೆನ್ ಕೊಟ್ಟ ಈ ದೀಡೀರ್‌ ಭೇಟಿಗೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಯಾಕಂದ್ರೆ ಯುದ್ದ ಪೀಡಿತ ಯುಕ್ರೇನ್‌ಗೆ ಅದೂ ರಾಜಧಾನಿ ಕಿಯೇವ್‌ಗೆ ಯಾವುದೇ ಮಾಹಿತಿಯನ್ನ ಕೊಡದೇ ಬೈಡೆನ್‌ ಸೀಕ್ರೇಟ್‌ ಆಗಿ ವಿಮಾನದ ಮೂಲಕ ಬಂದಿದ್ದಾರೆ. ಒಂದ್ವೇಳೆ ಯುಕ್ರೇನ್‌ ಸೇನೆ ಏನಾದ್ರೂ ಮುಂದುವರೆದು ಯಾವುದೋ ವಿಮಾನ ಅಂತ ಹೊಡೆದು ಹಾಕಿದ್ರೆ ಏನ್‌ ಗತಿ ಅಂತ ಅನೇಕರು ಈಗ ಆತಂಕ ವ್ಯಕ್ತಪಡಿಸಿದ್ದಾರೆ. ಅಮೆರಿಕ ಅಧ್ಯಕ್ಷರ ವಿಮಾನದಲ್ಲಿ ಹೆಚ್ಚಿನ ಭದ್ರತೆ ಇರುತ್ತೆ. ಹಾಗಿದ್ರೂ ಕೂಡ ಈ ಸಮಯದಲ್ಲಿ ಈ ರೀತಿ ರಿಸ್ಕ್‌ ಪ್ರಯಾಣ ಮಾಡುವ ಅವಶ್ಯಕತೆ ಏನಿತ್ತು ಅಂತ ಪ್ರಶ್ನೆ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply