ಇದು ನಮ್ಮಿಂದ ಮಾತ್ರ ಸಾಧ್ಯ, ನಮಗೆ ಮಾತ್ರ ಆ ತಾಕತ್ತು ಇದೆ: ಜೋ ಬೈಡೆನ್

masthmagaa.com:

ಅಫ್ಘಾನಿಸ್ತಾನದಿಂದ ಕಂಪ್ಲೀಟಾಗಿ ಗಂಟು ಮೂಟೆ ಕಟ್ಕೊಂಡು ಹೊರಗೆ ಹೋದ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ತಮ್ಮ ನಿರ್ಧಾರವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡ ಜೋ ಬೈಡೆನ್​​, ಅಫ್ಘಾನಿಸ್ತಾನ ಕಾರ್ಯಾಚರಣೆಯ ನಮ್ಮ ಉದ್ದೇಶ ಪೂರ್ಣಗೊಂಡಿದೆ. ಇನ್ನು ಮುಂದೆಯೂ ಅಲ್ಲಿರೋದಕ್ಕೆ ಸ್ಪಷ್ಟವಾದ ಉದ್ದೇಶವೇ ಇರಲಿಲ್ಲ.. ಹೀಗಾಗಿ ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಣೆ ಮುಗಿಸಿ ಸೇನೆ ಹಿಂದಕ್ಕೆ ಕರೆಸಿಕೊಳ್ಳೋದು ಬುದ್ಧಿವಂತಿಕೆಯ, ಅಮೆರಿಕಗೋಸ್ಕರ ತೆಗೆದುಕೊಂಡ ಒಳ್ಳೆ ನಿರ್ಧಾರ.. ಇದು ರಾಷ್ಟ್ರದ ಹಿತಕ್ಕೆ ಅನುಗುಣವಾಗಿಯೇ ಇದೆ ಅಂತ ಹೇಳಿದ್ದಾರೆ. ನಮಗೆ ಅಫ್ಘಾನಿಸ್ತಾನದಲ್ಲಿ 2 ಆಪ್ಶನ್ ಇತ್ತು. ಒಂದು ಸೇನೆ ಹಿಂದಕ್ಕೆ ಕರೆಸಿಕೊಳ್ಳೋದು.. ಮತ್ತೊಂದು ಸಂಘರ್ಷವನ್ನು ಮುಂದುವರಿಸೋದು.. ಆದ್ರೆ ಈ ಯುದ್ಧವನ್ನು ಮುಂದುವರಿಸಲು ನಮಗೆ ಇಷ್ಟವಿರಲಿಲ್ಲ ಅಂತ ಹೇಳಿದ್ದಾರೆ. ಸ್ಥಳಾಂತರ ಪ್ರಕ್ರಿಯೆ ಬಗ್ಗೆ ಮಾತನಾಡಿದ ಅವರು, ಇದು ಇತಿಹಾಸದ ಅತಿದೊಡ್ಡ ಏರ್​ಲಿಫ್ಟ್ ಆಗಿತ್ತು. 1.20 ಲಕ್ಷಕ್ಕೂ ಹೆಚ್ಚು ಜನರನ್ನು ಏರ್​ಲಿಫ್ಟ್ ಮಾಡಿದೀವಿ. ಇತಿಹಾಸದಲ್ಲೇ ಯಾವುದೇ ದೇಶ ಈ ರೀತಿ ಮಾಡಿಲ್ಲ. ಇದು ನಮ್ಮ ಎಕ್ಸ್ಟ್ರಾಡಿನರಿ ಸಕ್ಸಸ್​.. ಇಡೀ ಪ್ರಪಂಚದಲ್ಲಿ ಅಮೆರಿಕಾಗೆ ಮಾತ್ರ ಈ ಕೆಪಾಸಿಟಿ, ಇಚ್ಛಾಶಕ್ತಿ ಮತ್ತು ತಾಕತ್ತು ಇದೆ ಅಂತ ಹೇಳಿದ್ದಾರೆ. ಜಟ್ಟಿ ಜಾರಿ ಬಿದ್ರೂ ಮೀಸೆ ಮಣ್ಣಾಗಿಲ್ಲ ಅಂದ್ರಂತೆ.. ಈ ಗಾದೆ ಅಮೆರಿಕಗೆ ತುಂಬಾ ಕರೆಕ್ಟಾಗಿ ಸೂಟ್ ಆಗ್ತಿದೆ. ಯಾಕಂದ್ರೆ ಅಫ್ಘಾನಿಸ್ತಾನದಲ್ಲಿ 20 ವರ್ಷ ತಾಲಿಬಾನಿಗಳ ವಿರುದ್ಧ ಹೋರಾಡಿದ್ರೂ ಕೊನೆಗೆ ತಾಲಿಬಾನಿಗಳ ಕೈ ಮೇಲಾಗಿದೆ. ಈಗ ನೋಡಿದ್ರೆ ಸ್ಥಳಾಂತರ ಪ್ರಕ್ರಿಯೆ ಈ ಪ್ರಮಾಣದಲ್ಲಿ ನಡೆಸೋ ತಾಕತ್ತು ನಮಗೆ ಮಾತ್ರ ಅಂತ ಹೇಳ್ತಿದ್ದಾರೆ ಬೈಡೆನ್​. ನಂತರ ಮಾತು ಮುಂದುವರಿಸಿದ ಬೈಡೆನ್​​, ಈಗಲೂ ಅಫ್ಘಾನಿಸ್ತಾನದಲ್ಲಿ ಉಳಿದಿರೋ ಅಮೆರಿಕರನ್ನು ಕರೆತರಲು ನಾವು ಈಗಲೂ ಬದ್ಧ. ಅದಕ್ಕೆ ಯಾವುದೇ ಡೆಡ್​​ಲೈನ್ ಇಲ್ಲ. ಅಮೆರಿಕಗೆ ಬರೋಕೆ ಬಯಸೋರನ್ನು ನಾವು ಕರ್ಕೊಂಡು ಬಂದೇ ಬರ್ತೀವಿ ಅಂತ ಹೇಳಿದ್ದಾರೆ. ಇವೆಲ್ಲದ್ರ ನಡುವೆ ಅಮೆರಿಕದ 13 ಯೋಧರು ಸೇರಿದಂತೆ ನೂರಾರು ಜನರನ್ನು ಬಲಿಪಡೆದ ಐಎಸ್​ಕೆ ಉಗ್ರ ಸಂಘಟನೆಗೆ ವಾರ್ನಿಂಗ್ ಕೊಡೋಕೆ ಮರೆಯಲಿಲ್ಲ.. ನಿಮ್ಮ ವಿರುದ್ಧದ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ. ಮುಂದೆ ಇದೆ ನಿಮಗೆ ಅಂತ ಎಚ್ಚರಿಸಿದ್ದಾರೆ. ಜೊತೆಗೆ ಅಫ್ಘಾನಿಸ್ತಾನ ಸೇರಿದಂತೆ ಇತರೆ ದೇಶಗಳಲ್ಲೂ ಭಯೋತ್ಪಾದನೆ ವಿರುದ್ಧ ಅಮೆರಿಕದ ಹೋರಾಟ ಮುಂದುವರಿಯುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply