ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ & ಬೈಡನ್‌ ಮುನ್ನಡೆ!

masthmagaa.com:

ಐಒವಾ ಚುನಾವಣೆ ನಂತ್ರ ಇದೀಗ ನಡೆದ ನ್ಯೂ ಹ್ಯಾಂಪ್‌ಶೈರ್‌ ಪ್ರೈಮರಿ ಚುನಾವಣೆಯಲ್ಲಿ ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ರಿಪಬ್ಲಿಕನ್‌ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿಕ್ಕಿ ಹ್ಯಾಲಿರನ್ನ ಹಿಂದಕ್ಕೆ ಹಾಕಿ ಪಕ್ಷದ ಪ್ರತಿನಿಧಿಯಾಗಿ ಸೆಲೆಕ್ಟ್‌ ಆಗೋ ಹೊಸ್ತಿಲಲ್ಲಿದ್ದಾರೆ. ಇನ್ನೊಂದ್ಕಡೆ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆದ ಹ್ಯಾಂಪ್‌ಶೈರ್‌ ಪ್ರೈಮರಿ ವೋಟಿಂಗ್‌ನಲ್ಲಿ ಅಧ್ಯಕ್ಷ ಜೋ ಬೈಡನ್‌ ಮುನ್ನಡೆ ಸಾಧಿಸಿದ್ದಾರೆ. ಸೋ, ಅಧ್ಯಕ್ಷೀಯ ರೇಸ್‌ನಲ್ಲಿ ಮತ್ತೊಮ್ಮೆ ಟ್ರಂಪ್‌ ಮತ್ತು ಬೈಡನ್‌ ಮುಖಾಮುಖಿಯಾಗೋದು ಆಲ್ಮೋಸ್ಟ್‌ ಕನ್ಫರ್ಮ್‌ ಆಗಿದೆ.

-masthmagaa.com

Contact Us for Advertisement

Leave a Reply