ಆಪನ್‌ಹೈಮರ್‌ಗೆ ನೆಹರು ಅವ್ರಿಂದ ಭಾರತದ ಸಿಟಿಜನ್‌ಶಿಪ್‌ ಆಫರ್‌!

masthmagaa.com:

ಪರಮಾಣು ಸ್ಪೋಟಕದ ಜನಕ ಜೆ ರಾಬರ್ಟ್‌ ಅಪನ್‌ಹೈಮರ್‌ಗೆ ಭಾರತದ ಮೊದಲ ಪ್ರಧಾನಿ ಜವಾಹರ್‌ಲಾಲ್‌ ನೆಹರು ಭಾರತೀಯ ಪೌರತ್ವದ ಆಫರ್‌ ನೀಡಿದ್ರು ಅಂತ ಲೇಖಕ ಕೈ ಬರ್ಡ್‌ ಹೇಳಿದ್ದಾರೆ. 1954ರ ಟೈಮಲ್ಲಿ ಅಮೆರಿಕ ಆಪನ್‌ಹೈಮರ್‌ನ್ನ ಶತ್ರು ದೇಶದ ಏಜೆಂಟ್‌ ಅಂತ ಆರೋಪ ಮಾಡಿತ್ತು. ಆ ಟೈಮಲ್ಲಿ ಭಾರತದ ಸಿಟಿಜನ್‌ಶಿಪ್‌ ಆಫರ್‌ನ್ನ ನೆಹರು ಆಪರ್‌ಹೈಮರ್‌ಗೆ ನೀಡಿದ್ರು. ಆದ್ರೆ ದೇಶಭಕ್ತನಾದ ಆಪನ್‌ಹೈಮರ್ ಅದನ್ನ ಗಂಭೀರವಾಗಿ ಪರಿಗಣಿಸಲಿಲ್ಲ ಅಂತ ಅನ್ಸುತ್ತೆ ಅಂತ ʻAmerican Prometheus: The Triumph and Tragedy of J. Robert Oppenheimer’ ಪುಸ್ತಕದ ಸಹ ಲೇಖಕ ಬರ್ಡ್‌ ಸಂದರ್ಶನವೊಂದ್ರಲ್ಲಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply