masthmagaa.com:

ಹಕ್ಕಿಜ್ವರ ಹಿನ್ನೆಲೆ ದೆಹಲಿಯ ಹಲವೆಡೆ ಚಿಕನ್ ಮಾರಾಟದ ಮೇಲೆ ನಿಷೇಧ ಹೇರಲಾಗಿದೆ. ಚಿಕನ್​ ಮಾರಾಟ, ಖರೀದಿ ಮತ್ತು ಪ್ಯಾಕೇಜಿಂಗ್ ಮೇಲೆ ತಕ್ಷಣದಿಂದಲೇ ಬ್ಯಾನ್​ ಹೇರಲಾಗಿದೆ. ಅಲ್ಲದೆ ಕೋಳಿ ಸೇರಿದಂತೆ ಆಹಾರಕ್ಕಾಗಿ ಸಾಕುವ ಎಲ್ಲಾ ಬೆಗೆಯ ಪಕ್ಷಿಯ ಮಾಂಸ, ಮೊಟ್ಟೆಗಳಿಂದ ಮಾಡಿದ ಆಹಾರವನ್ನ ಸೇಲ್ ಮಾಡುವಂತಿಲ್ಲ ಅಂತ ಎಲ್ಲಾ ಹೋಟೆಲ್​ ಮತ್ತು ರೆಸ್ಟೋರೆಂಟ್​ಗಳಿಗೆ ಸೂಚಿಸಲಾಗಿದೆ. ಉತ್ತರ ದೆಹಲಿ ಮಹಾನಗರ ಪಾಲಿಕೆ ಮತ್ತು ದಕ್ಷಿಣ ದೆಹಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಆದೇಶ ಜಾರಿಗೆ ಬಂದಿದೆ.

ಮಹಾರಾಷ್ಟ್ರದಲ್ಲೂ ಹಕ್ಕಿಜ್ವರ ಹಾವಳಿ ಜೋರಾಗಿದ್ದು 238ಕ್ಕೂ ಹೆಚ್ಚು ಹಕ್ಕಿಗಳು ಇವತ್ತು ಸತ್ತಿದ್ದು, 5 ದಿನದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಹಕ್ಕಿಗಳು ಸತ್ತಿವೆ. ಇನ್ನು ದೇಶದಲ್ಲಿ ಇದುವರೆಗೆ 10 ರಾಜ್ಯಗಳಲ್ಲಿ ಹಕ್ಕಿಜ್ವರ ದೃಢಪಟ್ಟಿದೆ ಅಂತ ಕೇಂದ್ರ ಸರ್ಕಾರ ಹೇಳಿದೆ. ಇದರ ಜೊತೆಗೆ ಕೋಳಿ ಸೇರಿದಂತೆ ಇತರ ಹಕ್ಕಿಗಳ ಮಾಂಸ ಮತ್ತು ಮೊಟ್ಟೆ ಸೇವನೆ ಬಗ್ಗೆ ಏನು ಮಾಡಬೇಕು, ಏನು ಮಾಡಬಾರ್ದು ಅನ್ನೋದನ್ನ ಬಿಡುಗಡೆ ಮಾಡಬೇಕು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಕರ್ನಾಟಕದಲ್ಲಿ ಇದುವರೆಗೆ ಹಕ್ಕಿಜ್ವರ ದೃಢಪಟ್ಟಿಲ್ಲ, ಆದ್ರೆ ನಮ್ಮ ಪಕ್ಕದ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಬರ್ಡ್​ ಫ್ಲೂ ಹಾವಳಿ ಇಡ್ತಿದೆ.

-masthmagaa.com

Contact Us for Advertisement

Leave a Reply