ಬೆಂಗಳೂರು: ತಡವಾಗಿ ಬಂದ ಸಿಎಂ ಬೊಮ್ಮಾಯಿ, ಸನ್ಮಾನ ನಿರಾಕರಿಸಿದ ಟೆನಿಸ್‌ ದಿಗ್ಗಜ

masthmagaa.com:

ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದ್ರಲ್ಲಿ ಟೆನಿಸ್ ದಿಗ್ಗಜ ಬ್ಯೋನ್ ಬೋರ್ಗ್ ಅವರು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (KSLTA) ಯಲ್ಲಿ ಸನ್ಮಾನ ಸ್ವೀಕರಿಸಲು ನಿರಾಕರಿಸಿದ್ದಾರೆ. ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಒಂದೂವರೆ ಗಂಟೆ ತಡವಾಗಿ ಕಾರ್ಯಕ್ರಮಕ್ಕೆ ಬಂದಿದೇ ಇದಕ್ಕೆ ಕಾರಣ. ಸ್ವೀಡನ್‌ ದೇಶದವರಾದ ಬೋರ್ಗ್‌ 11 ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿಗಳನ್ನ ಗೆದ್ದಿದ್ದಾರೆ. ಬೋರ್ಗ್‌ ಅವ್ರ ಪುತ್ರ ಯೊ ಬೋರ್ಗ್‌, KSLTA ಕೋರ್ಟ್‌ನಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಗನ ಆಟ ನೋಡೋಕೆ ಬೋರ್ಗ್‌ ಅವರು ಬೆಂಗಳೂರಿಗೆ ಬಂದಿದ್ದಾರೆ. ಈ ವೇಳೆ ಭಾರತದ ಮಾಜಿ ಆಟಗಾರ ವಿಜಯ್‌ ಅಮೃತ್‌ರಾಜ್‌ ಮತ್ತು ಬೋರ್ಗ್‌ ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನ KSLTAನಲ್ಲಿ ಬೆಳಿಗ್ಗೆ 9.30ಕ್ಕೆ ಏರ್ಪಡಿಸಲಾಗಿತ್ತು. ಆದ್ರೆ ಸಿಎಂ ಬರದ ಕಾರಣ ಕಾರ್ಯಕ್ರಮ 11 ಗಂಟೆಯಾದರೂ ಆರಂಭವಾಗಿಲ್ಲ. ಮಗನ ಪಂದ್ಯ 11 ಗಂಟೆಗೆ ನಿಗದಿಯಾದ ಕಾರಣ ಬೊಮ್ಮಾಯಿ ಬರೊವರೆಗು ಕಾಯದೆ ಬೋರ್ಗ್‌ ಪಂದ್ಯ ವೀಕ್ಷಿಸೋಕೆ ತೆರಳಿದ್ದಾರೆ. ಕೊನೆಗೆ ಸಿಎಂ ಬಂದ ವಿಷಯವನ್ನ ಬೋರ್ಗ್ಗೆ ತಿಳಿಸಲಾಗಿದೆ. ಆದ್ರೆ ಪಂದ್ಯ ಮುಗಿದ ನಂತ್ರವೇ ಬರೋದಾಗಿ ಬೋರ್ಗ್‌ ಹೇಳಿದ್ದಾರೆ. ಇದರಿಂದ ಆಯೋಜಕರು ಸಮಾರಂಭವನ್ನು ರದ್ದುಗೊಳಿಸಿದ್ದಾರೆ ಅಂತ ಅಧಿಕಾರಿಯೊಬ್ರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply