2024ರ ಚುನಾವಣೆಯಲ್ಲೂ ಮೋದಿಯವರೇ ಮತ್ತೊಮ್ಮೆ ಪ್ರಧಾನಿ ಅಭ್ಯರ್ಥಿ: ಅಮಿತ್‌ ಶಾ

masthmagaa.com:

ಬಿಜೆಪಿ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇಂದು ಮಹತ್ವದ ಘೋಷಣೆ ಮಾಡಿದ್ದಾರೆ. ಮುಂಬರುವ ಸಾರ್ವತ್ರಿಕ ಚುನಾವಣೆಯನ್ನ ಕೂಡ ಮೋದಿ ನೇತೃತ್ವದಲ್ಲೇ ಎದುರಿಸಲಿದ್ದೇವೆ ಅಂತ ಹೇಳಿದ್ದಾರೆ. ಪಾಟ್ನಾದಲ್ಲಿ ನಡೆದ ವಿವಿಧ ಬಿಜೆಪಿ ಮೋರ್ಚಾಗಳ ರಾಷ್ಟ್ರೀಯ ಸಭೆಯಲ್ಲಿ ಮಾತನಾಡಿದ ಅಮಿತ್‌ ಶಾ ಈ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಮೂಲಕ ಮೂರನೇ ಬಾರಿಗೂ ಅಂದ್ರೆ 2024ರ ಚುನಾವಣೆಯಲ್ಲೂ ಮೋದಿಯವರೇ ಮತ್ತೊಂದು ಬಾರಿಗೆ ಪ್ರಧಾನಿ ಅಭ್ಯರ್ಥಿ ಆಗಲಿದ್ದಾರೆ. ಜೊತೆಗೆ ಜೆಡಿಯು ಜೊತೆಗಿನ ಮೈತ್ರಿ ಕೂಡ ಮುಂದುವರೆಯುತ್ತೆ. ಇದ್ರಲ್ಲಿ ಯಾವುದೇ ಕನ್ಫ್ಯೂಜನ್‌ ಇಲ್ಲ ಅಂತ ಅಮಿತ್‌ ಶಾ ಹೇಳಿದ್ದಾರೆ. ಆದ್ರೆ ಪ್ರಧಾನಿ ಅಭ್ಯರ್ಥಿಯಾಗಿ ಮೋದಿಯವರ ಈ ಘೋಷಣೆ ಕೆಲ ಗೊಂದಲ, ಚರ್ಚೆಗಳನ್ನ ಕೂಡ ಹುಟ್ಟುಹಾಕಿದೆ. ಯಾಕಂದ್ರೆ ಮೋದಿ ಅಮಿತ್‌ ಷಾ ಬಂದ ನಂತರದ ಬಿಜೆಪಿಯ ಸಿದ್ದಾಂತದ ಪ್ರಕಾರ 75 ವರ್ಷ ದಾಟಿದ ಮೇಲೆ ಅಧಿಕಾರ ಸ್ಥಾನಗಳಲ್ಲಿ ಕೂರೋ ಹಾಗಿಲ್ಲ. ಈಗಾಗಲೇ ಇದೇ ಲಾಜಿಕ್‌ ಅಡಿಯಲ್ಲಿ ಹಲವು ಮಂತ್ರಿಗಳು ಹಾಗೂ ಸಿಎಂಗಳನ್ನ ಮನೆಗೆ ಕಳಿಸಿದ್ದಾರೆ… ಆದ್ರೆ ಸಧ್ಯ ಮೋದಿ ಅವರಿಗೆ 71 ವರ್ಷ ವಯಸ್ಸು. 2024ಕ್ಕೆ ಮೋದಿಗೆ 74 ವರ್ಷ ಆಗುತ್ತೆ. ಅಧಿಕಾರಕ್ಕೆ ಬಂದರೂ ಒಂದೇ ವರ್ಷದಲ್ಲಿ 75 ದಾಟುತ್ತೆ. ಹೀಗಾಗಿ ಅದಾದ ಮೇಲೂ ಮೋದಿಯವರೇ ಅಧಿಕಾರದಲ್ಲೇ ಮುಂದುವರೀತಾರಾ, ಮೋದಿ ಅವರೇ ಮಾಡಿರೋ ಈ ರೂಲ್ಸ್‌ನ್ನ ಅವರಿಗಾಗಿ ಸಡಿಲಿಕೆ ಮಾಡಲಾಗುತ್ತಾ ಅನ್ನೋ ಚರ್ಚೆ ನಡೀತಿದೆ. ಹಾಗೆ ನೋಡಿದರೆ ಕರ್ನಾಟಕ ಸಿಎಂ ಆಗಿದ್ದ ಯಡಿಯೂರಪ್ಪ ಅವರಿಗೂ ಎರಡು ವರ್ಷಗಳ ವಿನಾಯಿತಿ ಕೊಟ್ಟು ಕಂಟಿನ್ಯೂ ಮಾಡಿದ್ದರು. ಎಲೆಕ್ಷನ್ಗೆ ಒಂದುವರೆ ವರ್ಷ ಇರುವಾಗಲಷ್ಟೇ ಅವರನ್ನ ಕೆಳಗಿಳಿಸಿ ಬೊಮ್ಮಾಯಿಗೆ ಅವಕಾಶ ಕೊಡಲಾಗಿತ್ತು. ಅಂತದರಲ್ಲಿ ಮೋದಿ ಬಿಜೆಪಿಯ ಅತಿದೊಡ್ಡ ನಾಯಕ. ಹೀಗಾಗಿ ಅವರ ವಿಚಾರದಲ್ಲಿ ಈ ನಿಯಮ ಸಡಿಲಿಕೆ ಮಾಡುವ ಸಾಧ್ಯತೆಯೇ ಹೆಚ್ಚು. ಮೋದಿ ಒಂದು ವೇಳೆ ಇಳಿತೀನಿ ಅಂದರೂ ಪಕ್ಷ ಮತ್ತು ಕಾರ್ಯಕರ್ತರು ಅದನ್ನ ಒಪ್ಪಿಕೊಳ್ಳುತ್ತಾರೆ ಅನ್ನೋ ವಾತಾವರಣ ಖಂಡಿತ ಇಲ್ಲ. ಹೀಗಾಗಿ ಈ ವಿಚಾರದ ಬಗ್ಗೆ ಸಾಕಷ್ಟು ಕುತೂಹಲ ಇದೆ.

-masthmagaa.com

Contact Us for Advertisement

Leave a Reply