ಪ್ರವಾದಿ ವಿರುದ್ದ ಅವಹೇಳನಕಾರಿ ಹೇಳಿಕೆ! ಬಿಜೆಪಿ MLA ಅರೆಸ್ಟ್!

masthmagaa.com:

ದೇಶದಲ್ಲಿ ನೂಪುರ್‌ ಶರ್ಮಾ ಪ್ರಕರಣ ತಣ್ಣಗಾಗ್ತಿದ್ದಂತೆ ಇತ್ತ ತೆಲಂಗಾಣದಲ್ಲಿ ಅಂತದ್ದೇ ಮತ್ತೊಂದು ಪ್ರಕರಣ ಭುಗಿಲೆದ್ದಿದೆ. ತೆಲಂಗಾಣದ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್‌ ಪ್ರವಾದಿ ಮೊಹಮ್ಮದ್‌ರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿರೋ ಆರೋಪದಲ್ಲಿ ಅವ್ರನ್ನ ಪೊಲೀಸರು ಬಂಧಿಸಿದ್ದಾರೆ. ಪ್ರವಾದಿ ಕುರಿತು ಮಾತನಾಡಿರೋ ವಿಡಿಯೋ ಒಂದನ್ನ ಬಿಡುಗಡೆ ಮಾಡಿದ ನಂತರ ಅದರ ವಿರುದ್ದ ಭಾರಿ ಪ್ರತಿಭಟನೆ ನಡೆದಿತ್ತು. ರಾಜಾ ಸಿಂಗ್‌ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಅಂತ ಆಕ್ರೋಶ ವ್ಯಕ್ತವಾಗಿತ್ತು. ಇದರ ಹಿನ್ನೆಲೆಯಲ್ಲಿ ಇದೀಗ ರಾಜಾ ಸಿಂಗ್‌ ಅವ್ರನ್ನ ಅರೆಸ್ಟ್‌ ಮಾಡಲಾಗಿದೆ.‌ ಕೋರ್ಟ್‌ 14 ದಿನಗಳ ನ್ಯಾಯಾಂಗ ಬಂಧನವನ್ನ ಕೂಡ ನೀಡಿದೆ. ಇತ್ತ ಬಿಜೆಪಿ ಸಹ ತಮ್ಮ ಶಾಸಕನನ್ನ ಸಸ್ಪೆಂಡ್‌ ಮಾಡಿದೆ. ಹಾಗೂ ಅವ್ರನ್ನ ಪಕ್ಷದಿಂದ ಯಾಕೆ ಉಚ್ಚಾಟನೆ ಮಾಡಬಾರ್ದು ಅನ್ನೋದಕ್ಕೆ ಉತ್ತರಿಸಲು ಪಕ್ಷ 10 ದಿನಗಳ ಕಾಲಾವಕಾಶವನ್ನ ನೀಡಿದೆ. ಇನ್ನು ಇತ್ತ ರಾಜಾ ಸಿಂಗ್ ವಿರುದ್ದವಾಗಿ AIMIMನ ಸೋಷಿಯಲ್‌ ಮೀಡಿಯಾ ಹೆಡ್‌, ರಾಜಕೀಯ ತಂತ್ರಜ್ಞ ಸೈಯದ್‌ ಅಬ್ದಾಹು ಕಷಫ್‌ ʻಸರ್‌ ತನ್‌ ಸೆ ಜುದಾʼ ಅಂದ್ರೆ ತಲೆ ಕತ್ತರಿಸೊ ಘೋಷಣೆಯನ್ನ ಕೂಗಿ, ಪ್ರತಿಭಟನೆ ಮಾಡುವಂತೆ ಕರೆ ಕೊಟ್ಟಿದ್ದಾರೆ. ಅಂದ್ಹಾಗೆ ಕಳೆದ ವಾರ ಹೈದರಾಬಾದ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಟ್ಯಾಂಡ್‌-ಅಪ್‌ ಕಾಮಿಡಿಯನ್ ಮುನಾವರ್‌ ಫರುಕಿ ಅವ್ರನ್ನ ಕರೆಸಲಾಗಿತ್ತು. ಈ ವೇಳೆ ಫರುಕಿ ಭಗವಾನ್‌ ರಾಮ್‌ ಹಾಗೂ ಮಾತೆ ಸೀತೆ ವಿರುದ್ದ ಕಾಮಿಡಿ ಮಾಡಿದ್ದಾರೆ ಅಂತ ರಾಜಾ ಸಿಂಗ್‌ ಆರೋಪಿಸಿದ್ರು. ಹಾಗೂ ಫರುಕಿ ಎಲ್ಲಿ ಕಾರ್ಯಕ್ರಮ ಮಾಡಿದ್ರೊ ಆ ವೇದಿಕೆಗೆ ಬೆಂಕಿ ಹಚ್ಚಲಾಗುತ್ತೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ಇದೀಗ ಇದರ ವಿರುದ್ದ ಹೈದರಾಬಾದ್‌ನಲ್ಲಿ ಭಾರಿ ಆಕ್ರೋಶ ವ್ಯಕ್ತವಾಗ್ತಿದೆ. ಘಟನೆಗೆ ಪ್ರತಿಕ್ರಿಯಿಸಿದ AIMIM ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ, ಇದು ನೂಪುರ್‌ ಶರ್ಮಾ ಕೇಸ್‌ನ ಮುಂದುವರೆದ ಭಾಗ. ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗ್ತಿದೆ. ಇದ್ರಿಂದ ಬಿಜೆಪಿ ಮುಸ್ಲಿಂರನ್ನ ಎಷ್ಟು ದ್ವೇಷಿಸುತ್ತೆ ಅಂತ ಗೊತ್ತಾಗುತ್ತೆ ಅಂತ ಹೇಳಿ ಘಟನೆಯನ್ನ ಖಂಡಿಸಿದ್ದಾರೆ.ಇನ್ನೊಂದ್‌ ಕಡೆ ತೆಲಂಗಾಣದಲ್ಲಿ ಬಿಜೆಪಿ-ಟಿಆರ್‌ಎಸ್‌ ಸಂಘರ್ಷ ಕೂಡ ತಾರಕಕ್ಕೇರಿದೆ. ಇಂದು ಬೆಳಿಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್‌ ಕುಮಾರ್‌ ಸೇರಿದಂತೆ ಹಲವು ಬಿಜೆಪಿ ನಾಯಕರನ್ನ ಬಂಧಿಸಲಾಗಿದೆ. ದಿಲ್ಲಿಯ ಲಿಕ್ಕರ್‌ ಹಗರಣದಲ್ಲಿ ಟಿಆರ್‌ಎಸ್‌ ನಾಯಕರ ಪಾತ್ರವಿದೆ ಅಂತ ಆರೋಪಿಸಿ ಬಿಜೆಪಿ ನಾಯಕರು ಇಂದು ಹೈದರಾಬಾದ್‌ನಲ್ಲಿ ಪ್ರತಿಭಟನೆ ನಡೆಸೋಕೆ ಮುಂದಾಗಿದ್ರು. ಇಲ್ಲಿನ ಘಾನ್ಪುರ್‌ ಕ್ಷೇತ್ರದಲ್ಲಿ ಭಾರಿ ಹೈಡ್ರಾಮಾ ನಡೆದಿದ್ದು, ಬಿಜೆಪಿ ನಾಯಕರನ್ನ ಅರೆಸ್ಟ್‌ ಮಾಡಲಾಗಿದೆ.

-masthmagaa.com

Contact Us for Advertisement

Leave a Reply