ಆಂಧ್ರದಲ್ಲಿ ಬಿಜೆಪಿಯ ಕ್ಲೀನ್‌ ಸ್ವೀಪ್‌ ಪ್ಲಾನ್:‌ BJP, TDP, JSP ದೋಸ್ತಿ

masthmagaa.com:

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಆಂದ್ರಪ್ರದೇಶದಲ್ಲಿ ತೆಲುಗು ದೇಸಂ ಪಾರ್ಟಿ(TDP), ಪವನ್‌ ಕಲ್ಯಾಣ್‌ರ ಜನಸೇನಾ ಪಾರ್ಟಿ(JSP) ಹಾಗೂ ಬಿಜೆಪಿಗಳು ಒಟ್ಟಾಗಿ ಮೈತ್ರಿ ಮಾಡಿಕೊಂಡಿವೆ. ಪಕ್ಷಗಳು ಒಟ್ಟಾಗಿ ಲೋಕಸಭೆ ಹಾಗೂ ವಿಧಾನಸಭೆ ಎಲೆಕ್ಷನ್‌ ಎದುರಿಸೋಕೆ ನಿರ್ಧರಿಸಿವೆ. ಈ ವಿಚಾರವನ್ನ ಅಫಿಶಿಯಲ್ಲಾಗಿ ಅನೌನ್ಸ್‌ ಮಾಡಿರೋ TDP ಪ್ರೆಸಿಡೆಂಟ್‌ ಎನ್‌ ಚಂದ್ರಬಾಬು ನಾಯ್ಡು, ಆಂಧ್ರದಲ್ಲಿ ನಮ್ಮ ಮೈತ್ರಿ ಕೂಟ ಕ್ಲೀನ್‌ ಸ್ವೀಪ್‌ ಮಾಡಲಿದೆ. ಇದು ದೇಶಕ್ಕೂ ಆಂಧ್ರಪ್ರದೇಶಕ್ಕೂ ವಿನ್‌-ವಿನ್‌ ಸಿಚುಯೇಶನ್‌ ಅಂದಿದ್ದಾರೆ.

 

ಇನ್ನು ಅತ್ತ ತಮಿಳು ಸೂಪರ್ಸ್ಟಾರ್‌ ಕಮಲ್‌ ಹಾಸನ್‌ರ ಮಕ್ಕಳ್‌ ನೀದಿ ಮೈಯಮ್‌(MNM) ಪಕ್ಷ, ಸ್ಟಾಲಿನ್‌ ನೇತೃತ್ವದ ಅಧಿಕಾರರೂಢ DMK ಜೊತೆ ಮೈತ್ರಿ ಮಾಡ್ಕೊಂಡಿದೆ. ಅಲ್ಲದೆ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡು ಹಾಗೂ ಪುದುಚೆರಿಗಳಲ್ಲಿ DMKಗೆ ಸಪೋರ್ಟ್‌ ಮಾಡೋದಾಗಿ ಘೋಷಿಸಿದೆ. ದೇಶದ ಸಲುವಾಗಿ DMK ಜೊತೆ ಕೈಜೋಡಿದ್ತಿದ್ದೀವಿ. ಯಾವುದೇ ಅಧಿಕಾರದ ಆಸೆಯಿಂದಲ್ಲ ಅಂತ ಕಮಲ್‌ ಹಸನ್‌ ಹೇಳಿದ್ದಾರೆ. DMK ಲೋಕಸಭೆಯಲ್ಲಿ MNMಗೆ ಒಂದೇ ಒಂದು ಸೀಟು ಬಿಟ್ಟು ಕೊಟ್ಟಿದೆ. ಇನ್ನು ಇದೇ ಟೈಮಲ್ಲಿ ಇಂಟ್ರಸ್ಟಿಂಗ್‌ ಹೇಳಿಕೆ ಕೊಟ್ಟಿರೋ ಸಿಎಂ ಎಂಕೆ ಸ್ಟಾಲಿನ್‌, ತಮ್ಮ ಪುತ್ರ ಉದಯನಿಧಿ ಸನಾತನಧರ್ಮದ ವಿರುದ್ಧ ಹೇಳಿಕೆ ಕೊಟ್ಟಿದ್ದನ್ನ ಸಮರ್ಥಿಸಿಕೊಂಡು, ʻಸನಾತನದ ಬಗ್ಗೆ ಮಾತನಾಡಿದ್ದಕ್ಕೆ ಚಿಕ್ಕ ಮಗುವನ್ನ ಟಾರ್ಗೆಟ್‌ ಮಾಡಲಾಗ್ತಿದೆ ಅಂದಿದ್ದಾರೆʼ. ಇನ್ನು ಪಿಎಂ ಮೋದಿ ಈಶಾನ್ಯ ರಾಜ್ಯಗಳಲ್ಲಿರೋ ಟೈಮಲ್ಲಿ ಅರುಣಾಚಲ ಪ್ರದೇಶದ ಮಾಜಿ ಸಿಎಂ ಹಾಗೂ ರಾಜ್ಯ ಕಾಂಗ್ರೆಸ್‌ ಪ್ರೆಸಿಡೆಂಟ್‌ ಆಗಿದ್ದ ನಬಂ ಟುಕಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಪಕ್ಷದ ಶಾಸಕರು ಬೇರೇ ಪಕ್ಷಗಳಿಗೆ ಹೋಗೋದನ್ನ ತಡೆಯೋಕೆ ಫೇಲ್‌ ಆಗಿದ್ದೇನೆ ಅಂತೇಳಿ ಟುಕಿ ರಾಜಿನಾಮೆ ನೀಡಿದ್ದಾರೆ. ಇನ್ನು ಏಪ್ರಿಲ್‌ 19ಕ್ಕೆ ಲೋಕಸಭಾ ಎಲೆಕ್ಷನ್‌ ನಡೆಯಲಿದೆ, ಮೇ 22ಕ್ಕೆ ಕೌಂಟಿಂಗ್‌ ನೆರಯಲಿದೆ ಅನ್ನೋ ಫಾರ್ವರ್ಡ್‌ ಮೆಸೇಜ್‌ ಒಂದು ವಾಟ್ಸಾಪ್‌ನಲ್ಲಿ ಹರಿದಾಡತ್ತು. ಮಾರ್ಚ್‌ 12ರಿಂದ ನೀತಿ ಸಂಹಿತೆ ನಾರಿ ಆಗುತ್ತೆ ಅನ್ನೋ ವಿಚಾರನೂ ಇದ್ರಲ್ಲಿತ್ತು. ಆದ್ರೆ ಇದೀಗ ಇದು ಫೇಕ್‌ ಮೆಸೇಜ್‌ ಅಂತ ಚುನಾವಣಾ ಆಯೋಗ ಕ್ಲಾರಿಟಿ ಕೊಟ್ಟಿದೆ.

-masthmagaa.com

Contact Us for Advertisement

Leave a Reply