ಅಫ್ಘಾನಿಸ್ತಾನದಲ್ಲಿ ಸ್ಫೋಟ! ತಾಲಿಬಾನ್ ಪೊಲೀಸ್ ಮುಖ್ಯಸ್ಥ ಸಾವು

masthmagaa.com:

ಆಗ ತಾಲಿಬಾನಿಗಳು ಸ್ಫೋಟಕ ಇಟ್ಟು ಅಫ್ಘನ್ ಸರ್ಕಾರದ ಯೋಧರನ್ನು ಟಾರ್ಗೆಟ್ ಮಾಡ್ತಿದ್ರು. ಆದ್ರೀಗ ಉಗ್ರರು ತಾಲಿಬಾನಿಗಳನ್ನೇ ಟಾರ್ಗೆಟ್ ಮಾಡೋಕೆ ಶುರು ಮಾಡಿದ್ದಾರೆ. ತಾಲಿಬಾನ್ ಪೊಲೀಸ್ ಚೀಫ್ ಹೋಗ್ತಿದ್ದ ವಾಹನ ಗುರಿಯಾಗಿಸಿ ಸ್ಫೋಟ ನಡೆಸಿದ್ದಾರೆ. ಕುನಾರ್ ಪ್ರಾಂತ್ಯದಲ್ಲಿರೋ ಅಸದಾಬಾದ್​​ನ ಶಿಘಲ್ ಜಿಲ್ಲೆಯಲ್ಲಿ ಈ ದಾಳಿ ನಡೆದಿದ್ದು, ತಾಲಿಬಾನ್ ಪೊಲೀಸ್ ಚೀಫ್​​ ಪ್ರಾಣ ಕಳ್ಕೊಂಡಿದ್ದಾರೆ. ಜೊತೆಗೆ 7 ಮಂದಿ ನಾಗರಿಕರು ಮತ್ತು ನಾಲ್ವರು ತಾಲಿಬಾನ್ ಫೈಟರ್​​ಗಳು ಕೂಡ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಆದ್ರೆ ಈ ದಾಳಿಯ ಹೊಣೆಯನ್ನು ಈವರೆಗೆ ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ. ಆದ್ರೆ ಪೂರ್ವ ಅಫ್ಘಾನಿಸ್ತಾನದಲ್ಲಿ ಐಎಸ್ ಉಗ್ರ ಸಂಘಟನೆ ತುಂಬಾ ಆಕ್ಟೀವ್ ಆಗಿದ್ದು, ಇತ್ತೀಚೆಗೆ ನಡೆದ ಇದೇ ರೀತಿಯ ದಾಳಿಗಳ ಹೊಣೆಯನ್ನು ಇದೇ ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಹೀಗಾಗಿ ಈ ದಾಳಿಯ ಹಿಂದೆಯೂ ಇವರೇ ಇರಬಹುದು ಅನ್ನೋ ಮಾತುಗಳು ಕೇಳಿ ಬರ್ತಿವೆ.

-masthmagaa.com

Contact Us for Advertisement

Leave a Reply