ಎಲೆಕ್ಷನ್‌ ಮುನ್ನ ಪಾಕ್‌ ಚುನಾವಣಾ ಆಯೋಗದ ಕಚೇರಿ ಬಳಿ ಸ್ಪೋಟ!

masthmagaa.com:

ಪಾಕ್‌ ಸಾರ್ವತ್ರಿಕ ಚುನಾವಣೆಗೆ ಕೆಲವು ದಿನಗಳು ಇರುವಾಗ್ಲೇ, ಕರಾಚಿಯ ಚುನಾವಣಾ ಆಯೋಗದ ಆಫೀಸ್‌ ಬಳಿ ಸ್ಪೋಟ ಸಂಭವಿಸಿದೆ. ಆದ್ರೆ ಈ ಸ್ಪೋಟದಲ್ಲಿ ಯಾವುದೇ ಸಾವು-ನೋವುಗಳಾಗಿಲ್ಲ. ಎಲೆಕ್ಷನ್‌ ಕಮಿಷನ್‌ ಆಫೀಸ್‌ ಪಕ್ಕದ ಅಂಗಡಿಯೊಂದರಲ್ಲಿ ಸ್ಪೋಟಕಗಳನ್ನ ಇಡಲಾಗಿತ್ತು ಅಂತ ವರದಿಯಾಗಿದೆ. 400 ಕಚ್ಚಾ ಸ್ಪೋಟಕ ಬಳಸಿ ಈ ದಾಳಿ ಮಾಡಲಾಗಿದೆ ಅಂತ ಪೊಲೀಸರು ಹೇಳಿದ್ದಾರೆ. ಅತ್ತ ಬಲೊಚಿಸ್ತಾನ್ ಪ್ರಾಂತ್ಯದಲ್ಲಿ ಕೂಡ ಗುರುವಾರ 10 ಕಡೆ ಸ್ಪೋಟಕ & ‌ಗ್ರನೇಡ್ ದಾಳಿಗಳಾಗಿ ಒರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಹಲವು ಪೊಲೀಸ್‌ ಸ್ಟೇಷನ್‌ಗಳು ಹಾಗೂ ಡೆಪ್ಯುಟಿ ಕಮೀಷನರ್‌ ಕಛೇರಿಗಳನ್ನ ಟಾರ್ಗೆಟ್‌ ಮಾಡಿ ದಾಳಿ ನಡೆಸಲಾಗಿದೆ. ಈ ದಾಳಿಗಳಲ್ಲಿ ಪೊಲೀಸರು ಸೇರಿ ಹಲವು ಮಂದಿಗೆ ಗಾಯಗಳಾಗಿವೆ.

-masthmagaa.com

Contact Us for Advertisement

Leave a Reply