ಬೆಂಗಳೂರಿನ ಮೇಲೆ 15 ದಿನಗಳಿಂದ ಬೋಯಿಂಗ್‌ ವಿಮಾನ ಪ್ರದಕ್ಷಿಣೆ!

masthmagaa.com:

ಜಗತ್ತಿನ ತುಂಬೆಲ್ಲಾ ಬೋಯಿಂಗ್‌ ವಿಮಾನಗಳ ನಟ್ಟು-ಬೋಲ್ಟು ಲೂಸಾಗಿ ಸದ್ದು ಮಾಡ್ತಿದ್ರೆ, ಇಲ್ಲೊಂದು ಬೋಯಿಂಗ್‌ ವಿಮಾನ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ, ಬಹಳ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿ ಸದ್ದು ಮಾಡ್ತಿದೆ. ಒಂದೆರಡು ದಿನ ಅಲ್ಲ… ಕಳೆದ ಒಂದೆರಡು ವಾರಗಳಿಂದ ಈ ವಿಮಾನ ಕೋರಮಂಗಲದ HAL ವಿಮಾನ ನಿಲ್ದಾಣದ ಬಳಿ ಬಂದು ರೌಂಡ್‌ ಹಾಕ್ತಿದೆ. ದೆಹಲಿಯಿಂದ ಬರ್ತಿದೆ, HAL ಮೇಲೆ ಕಡಿಮೆ ಎತ್ತರದಲ್ಲಿ ಐದಾರು ಪ್ರದಕ್ಷಿಣೆ ಹಾಕಿ ವಾಪಸ್‌ ಹೋಗ್ತಿದೆ. ಪ್ರಧಾನಿ, ರಾಷ್ಟ್ರಪತಿಗಳಂತ VVIPಗಳು ಬಳಸೋ ಈ ವಿಮಾನವನ್ನ ಪೈಲಟ್‌ಗಳಿಗೆ ಟ್ರೈನಿಂಗ್‌ ಕೊಡೋಕೆ ಈ ರೀತಿ ಬಳಸಲಾಗ್ತಿರ್ಬೋದು ಅಂತ ವಿಜ್ಞಾನಿಯೊಬ್ರು ಹೇಳಿದ್ದಾರೆ. ಅಲ್ಲದೆ HAL ಡಿಫೆನ್ಸ್‌ ಏರ್‌ಪೋರ್ಟ್‌ನ್ನ ಕಮರ್ಷಿಯಲ್‌ ಏರ್‌ಲೈನ್ಸ್‌ ಪೈಲಟ್‌ಗಳ ತರಬೇತಿಗೂ ಬಳಸಲಾಗತ್ತೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply