ಬೆಂಗಳೂರಿನ ರಾಜಭವನಕ್ಕೆ ಬಾಂಬ್‌ ಬೆದರಿಕೆ!

masthmagaa.com:

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಸ್ಪೋಟಕ ಬೆದರಿಕೆ ನೀಡೋದು ಕಿಡಿಗೇಡಿಗಳಿಗೆ ಒಳ್ಳೆ ಕಡಲೆಪುರಿ ತಿಂದ ಹಾಗೆ ಆಗ್ಬಿಟ್ಟಿದೆ. ಇದೀಗ ಸ್ಪೋಟಕ ಬೆದರಿಕೆಯ ಮತ್ತೊಂದು ಪ್ರಕರಣ ಬೆಂಗಳೂರಿನಲ್ಲಿ ತಲೆ ಎತ್ತಿದೆ. ಇಲ್ಲಿನ ರಾಜಭವನಕ್ಕೆ ಅಪರಿಚಿತ ಕಿಡಿಗೇಡಿಗಳು ಡಿಸೆಂಬರ್‌ 11ರ ರಾತ್ರಿ ಬಾಂಬ್‌ ಬೆದರಿಕೆ ನೀಡಿದ್ದಾರೆ. ಬೆಂಗಳೂರಿನ ದೊಮ್ಮಲೂರಿನಲ್ಲಿರೋ NIAನ ಕಂಟ್ರೋಲ್‌ ರೂಮ್‌ಗೆ ಮಧ್ಯರಾತ್ರಿ 12 ಗಂಟೆಗೆ ಅಪರಿಚಿತ ನಂಬರ್‌ನಿಂದ ಕಾಲ್‌ ಬಂದಿದೆ. ಕಾಲ್‌ ಮಾಡಿದ ವ್ಯಕ್ತಿ ರಾಜಭವನದ ಆವರಣದಲ್ಲಿ ಸ್ಪೋಟಲ ಇಟ್ಟಿದ್ದೀವಿ, ಯಾವ ಕ್ಷಣದಲ್ಲಾದ್ರೂ ಸ್ಫೋಟಗೊಳ್ಬೋದು ಅಂತ ಬೆದರಿಕೆ ನೀಡಿದ್ದಾನೆ. NIA ಕಂಟ್ರೋಲ್‌ ರೂಮ್‌ ತಕ್ಷಣವೇ ಬೆಂಗಳೂರು ಸಿಟಿ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಕಾಲ್‌ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಕ್ತಿದ್ಹಾಗೆ ಬೆಂಗಳೂರಿನ ಸಿಟಿ ಪೊಲೀಸ್‌ ಆ್ಯಕ್ಷನ್‌ಗೆ ಇಳಿದಿದ್ದಾರೆ. ಸ್ಪೋಟಕ ನಿಷ್ಕ್ರಿಯ ದಳ, ಶ್ವಾನ ದಳದೊಂದಿಗೆ ಕಾರ್ಯಚರಣೆ ಪ್ರಾರಂಭಿಸಿದ್ದಾರೆ. ಸುದೀರ್ಘ ಕಾರ್ಯಚರಣೆಯ ನಂತರ, ಇದೊಂದು ಕೇವಲ ಹುಸಿ ಬಾಂಬ್‌ ಬೆದರಿಕೆʼ ಅಂತ ಡೆಪ್ಯುಟಿ ಕಮಿಷನರ್‌ ಆಫ್‌ ಪೊಲೀಸ್‌ ತಿಳಿಸಿದ್ದಾರೆ. ಜೊತೆಗೆ ಈ ಬಗ್ಗೆ ಭಯ ಪಡಬೇಕಿಲ್ಲ. ರಾಜಭವನದಲ್ಲಿ ಮೊದಲಿಂದಲೂ ಟೈಟ್‌ ಸೆಕ್ಯುರಿಟಿ ಇದೆ. ಇನ್ನೂ ಹೆಚ್ಚಿನ ಕ್ರಮಗಳನ್ನ ಈಗ ತೆಗೆದುಕೊಳ್ತೇವೆ ಅಂತಾನೂ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply