ಅತ್ಯಾಚಾರ ಎಸಗಿದ್ದ ಆರೋಪಿಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್‌!

masthmagaa.com:

13 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿರೋ ಆರೋಪದಲ್ಲಿ ಅರೆಸ್ಟ್‌ ಆಗಿದ್ದ 26 ವರ್ಷದ ವ್ಯಕ್ತಿಗೆ ಇದೀಗ ಬಾಂಬೆ ಹೈಕೋರ್ಟ್‌ ಜಾಮೀನು ನೀಡಿದೆ. ʻಆರೋಪಿ ಮತ್ತು ಬಾಲಕಿ ಒಬ್ರನೊಬ್ರು ಪ್ರೀತಿಸ್ತಿದ್ರು. ಆದ್ರಿಂದ ಈ ಕೃತ್ಯ ನಡೆದಿರೋದು ಯಾವ್ದೇ ರೀತಿಯ ಕೆಟ್ಟಾಸೆಯಿಂದಲ್ಲ, ಬದಲಾಗಿ ಪ್ರೀತಿಯಿಂದ.. ಲವ್‌ನಿಂದʼ ಅಂತ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ತೀರ್ಪು ನೀಡಿದೆ. ಈ ಕೇಸ್‌ನ ಆರೋಪಿ ನಿತಿನ್‌ ಧಬೆರಾವ್‌ ವಿರುದ್ಧ ಬಾಲಕಿ ತಂದೆ ಕೇಸ್‌ ಹಾಕಿದ್ರು. ನಂತರ ವಿಚಾರಣೆ ವೇಳೆ ಬಾಲಕಿ, ತನ್ನ ಮತ್ತು ನಿತಿನ್‌ ಮಧ್ಯೆ ಸಂಬಂಧ ಇದೆ. ಆತ ನನ್ನನ್ನ ಮದುವೆ ಆಗ್ತೀನಿ ಅಂತ ಆಣೆ ಮಾಡಿದ್ದಾನೆ ಅಂತ ಹೇಳಿಕೆ ನೀಡಿದ್ರು. ಈ ಬೆನ್ನಲ್ಲೇ ಕೋರ್ಟ್‌ ಆರೋಪಿಗೆ ಜಾಮೀನು ನೀಡಿದೆ.

-masthmagaa.com

Contact Us for Advertisement

Leave a Reply