ಅಸ್ಸಾಂ-ಮಿಜೋರಾಂ ಗಡಿ ಗಲಾಟೆ ಅಂತ್ಯ.. ಹೇಗೆ ಗೊತ್ತಾ..?

masthmagaa.com:

ಅಸ್ಸಾಂ ಮತ್ತು ಮಿಜೋರಾಂ ಸರ್ಕಾರಗಳು ಇವತ್ತು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಮಾತುಕತೆ ಮೂಲಕ ಎರಡೂ ರಾಜ್ಯಗಳ ಗಡಿಯಲ್ಲಿ ನಿರ್ಮಾಣವಾಗಿರೋ ಸಂಘರ್ಷದ ವಾತಾವರಣವನ್ನ ಬಗೆಹರಿಸುತ್ತೇವೆ ಅಂತ ಹೇಳಿಕೊಂಡಿವೆ.. ಜೊತೆಗೆ ಎರಡೂ ರಾಜ್ಯ ಕೂಡ ತಮ್ಮ ಪೊಲೀಸ್​ ಮತ್ತು ಅರಣ್ಯ ಪಡೆಗಳನ್ನ ಗಡಿಯಲ್ಲಿ ಗಸ್ತು ತಿರುಗೋಕೆ ಕಳಿಸಲ್ಲ ಅಂತಾನೂ ಒಪ್ಪಿಕೊಂಡಿವೆ. ಇತ್ತೀಚೆಗೆ ಗಡಿಯಲ್ಲಿ ಎರಡೂ ರಾಜ್ಯದವರು ಹೊಡೆದಾಡಿಕೊಂಡು ಅಸ್ಸಾಂನ ಏಳು ಪೊಲೀಸರು ಪ್ರಾಣ ಕಳ್ಕೊಂಡಿದ್ರು.

-masthmagaa.com

Contact Us for Advertisement

Leave a Reply