ಲಡಾಖ್‌ನಲ್ಲಿ ಹೊಸ ವಾಯುನೆಲೆ: ಚೀನಾಗೆ ಟಕ್ಕರ್‌ ಕೊಡೊಕೆ ರೆಡಿಯಾದ ಭಾರತ

masthmagaa.com:

ಭಾರತದ ಗಡಿ ಪ್ರದೇಶವನ್ನ ಒಳಗೊಂಡ ಮ್ಯಾಪ್‌ನ್ನ ಚೀನಾ ಬಿಡುಗಡೆ ಮಾಡಿದ ಬೆನ್ನಲ್ಲೇ ಇತ್ತ ಗಡಿಯಲ್ಲಿ ಕೇಂದ್ರ ಸರ್ಕಾರ ಕೂಡ ತನ್ನ ಚಟುವಟಿಕೆ ಮುಂದುವರೆಸಿದೆ. ಪೂರ್ವ ಲಡಾಖ್‌ನ ನ್ಯೋಮಾ ಬೆಲ್ಟ್‌ನಲ್ಲಿ ಸುಧಾರಿತ ವಾಯುನೆಲೆ ನಿರ್ಮಾಣಕ್ಕೆ ಮುಂದಾಗಿದೆ. ಈ ಬಗ್ಗೆ ಗಡಿ ರಸ್ತೆ ನಿರ್ಮಾಣ ಸಂಸ್ಥೆ (BRO) ಮಾಹಿತಿ ನೀಡಿದ್ದು, ಪೂರ್ವ ಲಡಾಖ್‌ನ ನ್ಯೋಮಾ ಬೆಲ್ಟ್‌ನಲ್ಲಿ ಸುಮಾರು ₹218 ಕೋಟಿ ವೆಚ್ಚದಲ್ಲಿ ಸುಧಾರಿತ ವಾಯುನೆಲೆಯನ್ನ ನಿರ್ಮಿಸಲಾಗುತ್ತೆ ಅಂತ ಹೇಳಿದೆ. ಇನ್ನು ವಾಯುನೆಲೆಯನ್ನ ಚೀನಾದ LAC ರೇಖೆಯಿಂದ 46 ಕಿಮೀ ದೂರದಲ್ಲಿ ನಿರ್ಮಿಸಲಾಗುತ್ತಿದೆ.ಈ ಯೋಜನೆಗೆ ಸೆಪ್ಟಂಬರ್‌ 12 ರಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಶಂಕುಸ್ಥಾಪನೆ ಮಾಡಲಿದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply