ರಷ್ಯಾ ಮೇಲೆ ಬಲು ಪ್ರೀತಿ, ಸಾಯಲು ಸಿದ್ದ ಅಂದ ಬ್ರಿಟಿಷ್‌ ಯೋಧ!

masthmagaa.com:

ಯುಕ್ರೇನ್‌ ವಿರುದ್ದದ ಯುದ್ದದಲ್ಲಿ ರಷ್ಯಾ ಪರ ಬ್ರಿಟಿಷ್ ಯೋಧನೊಬ್ಬ ಹೋರಾಡ್ತಿದ್ದು, ನಾನು ರಷ್ಯಾಗಾಗಿ, ಅಧ್ಯಕ್ಷ ಪುಟಿನ್‌ಗಾಗಿ ಸಾಯೋಕೆ ಸಿದ್ದ ಅಂತೇಳಿದ್ದಾನೆ. ಬ್ರಿಟನ್‌ ಮೂಲದ ಏಡನ್‌ ಮಿನ್ನಿಸ್‌ ಅನ್ನೊ ಯೋಧ ರಷ್ಯಾ ಸೇನೆಯಲ್ಲಿದ್ದು, ನಾನು ದೇವರ ಕೆಲ್ಸ ಮಾಡ್ತಿದ್ದೀನಿ ಅಂದಿದ್ದಾನೆ. ಅಲ್ದೇ ನನಗೆ ರಷ್ಯಾ ಸಾಕಷ್ಟು ಸಹಾಯ ಮಾಡಿದೆ. ನನ್ನ ಮತ್ತು ರಷ್ಯನ್ನರ ಮಧ್ಯೆ ಉತ್ತಮ ಹೊಂದಾಣಿಕೆ ಇದೆ ಅಂದಿದ್ದಾನೆ. ಅಂದ್ಹಾಗೆ ಬ್ರಿಟನ್‌ನಲ್ಲಿ ಈ ಏಡನ್‌ ಮೇಲೆ ಕ್ರಿಮಿನಲ್‌ ಕೇಸ್‌ ಇದ್ದು, ಈತ ಶಿಕ್ಷೆಗೂ ಒಳಗಾಗಿದ್ದ. ಜೊತೆಗೆ ಬ್ರಿಟನ್‌ನ ನ್ಯಾಷನಲ್‌ ಫ್ರಂಟ್‌ ಪಾಲಿಟಿಕಲ್‌ ಪಾರ್ಟಿಯ ಸದಸ್ಯ ಕೂಡ ಆಗಿದ್ದ. ಕಳೆದ ಜನವರಿಯಲ್ಲಿ ರಷ್ಯಾಗೆ ಬಂದು ಅಲ್ಲಿನ ಸೇನೆಗೆ ಸೇರಿಕೊಂಡು ಯುದ್ಧದಲ್ಲಿ ಪಾಲ್ಗೊಂಡಿದ್ದಾನೆ.

-masthmagaa.com

Contact Us for Advertisement

Leave a Reply