ಪಾಕ್​ನಲ್ಲಿ ಹಿಜಬ್​.. UKನಲ್ಲಿ ಗುಜರಾತ್​ ಗಲಭೆ ವಿಚಾರ ಚರ್ಚೆ!

masthmagaa.com:

ಒಂದ್ಕಡೆ ಪಾಕಿಸ್ತಾನ ಹಿಜಬ್ ವಿಚಾರದ ಬಗ್ಗೆ ಮಾತನಾಡಿದ್ರೆ.. ಅತ್ತ ಯುನೈಟೆಡ್​ ಕಿಂಗ್ಡಮ್​ನಲ್ಲಿ 2002ರ ಗುಜರಾತ್​ ಗಲಭೆ ವಿಚಾರ ಚರ್ಚೆಗೆ ಬಂದಿದೆ. ಗುಜರಾತ್​ ಗಲಭೆಗೆ 20 ವರ್ಷ ಆಗ್ತಿರೋ ಹಿನ್ನೆಲೆ ಯುಕೆಯ ಹೌಸ್ ಆಫ್​ ಕಾಮನ್ಸ್​ನಲ್ಲಿ ಚರ್ಚೆ ನಡೀತು. ಈ ವೇಳೆ ವಿಪಕ್ಷವಾದ ಲೇಬರ್ ಪಾರ್ಟಿಯ ಸಂಸದೆ ಕಿಮ್​ ಲೀಡ್​ಬೀಟರ್​, ಗುಜರಾತ್​ ಗಲಭೆಗೆ ಸಂಬಂಧಿಸಿದಂತೆ ಪಬ್ಲಿಷ್​ ಆಗದ ಯಾವುದಾದ್ರೂ ರಿಪೋರ್ಟ್ ಯುಕೆ ಬಳಿ ಇದ್ರೆ ಅದನ್ನ ಪಬ್ಲಿಷ್​ ಮಾಡ್ಬೇಕು ಅಂತ ಆಗ್ರಹಿಸಿದ್ರು. ಅಂದ್ಹಾಗೆ ತನ್ನ ಕ್ಷೇತ್ರದ ಬ್ರಿಟಿಷ್​ ಮುಸ್ಲಿಂ ಕುಟುಂಬವು ಆ ಗಲಭೆಯಲ್ಲಿ ಹಲವು ಸದಸ್ಯರನ್ನ ಕಳೆದುಕೊಂಡಿತ್ತು. ಅವರಿಗೆ ನ್ಯಾಯ ಸಿಕ್ಕಿಲ್ಲ ಅಂತ ನಂಗೆ ಅನಿಸುತ್ತೆ. ಅವರ ಪ್ರೀತಿಪಾತ್ರರ ಅವಶೇಷ ಕೂಡ ಯುಕೆಗೆ ಬಂದಿಲ್ಲ. ಇದರ ಬಗ್ಗೆ ಬ್ರಿಟಿಷ್ ಅಧಿಕಾರಿ ತನಿಖೆ ನಡೆಸಬೇಕು ಮತ್ತು ಗಲಭೆಗೆ ಸಂಬಂಧಿಸಿದಂತೆ ಯುಕೆ ಬಳಿ ಯಾವುದಾದ್ರೂ ಅನ್​ಪಬ್ಲಿಷ್ಡ್​ ರಿಪೋರ್ಟ್​ಗಳಿದ್ರೆ ಅದನ್ನ ಪಬ್ಲಿಷ್ ಮಾಡ್ಬೇಕು ಅನ್ನೋದು ಕುಟುಂಬಸ್ಥರ ಡಿಮಾಂಡ್ ಅಂತ ಕಿಮ್​ ಲೀಡ್​ಬೀಟರ್ ಹೇಳಿದ್ರು. ಇದಕ್ಕೆ ಉತ್ತರಕೊಟ್ಟ ಆಡಳಿತ ಪಕ್ಷವಾದ ಕನ್ಸರ್ವೇಟಿವ್ ಪಕ್ಷದ ಮಿನಿಸ್ಟರ್ ಆಫ್​ ಸ್ಟೇಟ್​ ಫಾರ್ ಏಷ್ಯಾ ಅಮಾಂಡಾ​ ಮಿಲ್ಲಿಂಗ್​, ಗುಜರಾತ್ ಗಲಭೆ ವೇಳೆ ಪಬ್ಲಿಷ್ ಆಗದ ರಿಪೋರ್ಟ್ಸ್ ನಮ್ಮ ಬಳಿ ಯಾವುದೂ ಇಲ್ಲ. ಮತ್ತು ಆಗ ವಾಜಪೇಯಿ ಸರ್ಕಾರ ಹಿಂಸಾಚಾರವನ್ನ ಖಂಡಿಸಿತ್ತು ಅಂತ ಹೇಳಿದ್ದಾರೆ. ಪ್ರಪಂಚದ ಯಾವುದೇ ದೇಶದಲ್ಲಿ ನಡೆಯೋ ಧಾರ್ಮಿಕ ತಾರತಮ್ಯವನ್ನ ನಾವು ಖಂಡಿಸ್ತೀವಿ. ಸಂವಿಧಾನದಲ್ಲಿರುವ ಎಲ್ಲಾ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನ ಭಾರತ ಎತ್ತಿ ಹಿಡಿಯುತ್ತೆ ಅಂತ ನಾವು ನಿರೀಕ್ಷಿಸ್ತೀವಿ ಅಂತಾನೂ ಅಮಾಂಡಾ ಮಿಲ್ಲಿಂಗ್ ಹೇಳಿದ್ರು.

-masthmagaa.com

Contact Us for Advertisement

Leave a Reply