ಜಮ್ಮುವಿನ ಇಂಡೋ-ಪಾಕ್‌ ಗಡಿಯಲ್ಲಿ ಕಳೆದ 10 ದಿನಗಳಲ್ಲಿ 2 ಫ್ಲಾಗ್‌ ಮೀಟಿಂಗ್!‌

masthmagaa.com:

ಜಮ್ಮು ಕಾಶ್ಮೀರದ ಸುಚೇತ್‌ಘರ್‌ನ ಬಾರ್ಡರ್‌ ಔಟ್‌ಪೋಸ್ಟ್‌ ಬಳಿ ಇಂದು ಭಾರತ-ಪಾಕ್‌ ಸೇನೆಯ ಕಮ್ಯಾಂಡರ್‌ ಲೆವೆಲ್‌ ಮೀಟಿಂಗ್‌ ನಡೆದಿದೆ. ಕಳೆದ 10 ದಿನಗಳಲ್ಲಿ ಉಭಯ ದೇಶಗಳ ನಡುವಿನ ಎರಡನೇ ಫ್ಲಾಗ್‌ ಮೀಟಿಂಗ್ ಇದಾಗಿದೆ. ಗುರುವಾರ ರಾತ್ರಿ ಸುಮಾರು 8 ಗಂಟೆ ಹೊತ್ತಿನಲ್ಲಿ ಇಲ್ಲಿನ ಆರ್ನಿಯ ಪ್ರಾಂತ್ಯದಲ್ಲಿ ಪಾಕ್‌ ಸೇನೆ ಅಪ್ರಚೋದಿತ ಗುಂಡು ಹಾಗೂ ಶೆಲ್‌ ದಾಳಿ ನಡೆಸಿತ್ತು. ಈ ಬೆನ್ನಲ್ಲೇ ಇಂದು ಫ್ಲಾಗ್‌ ಮೀಟಿಂಗ್‌ ನಡೆದಿದೆ. ಸುಮಾರು ಒಂದು ಗಂಟೆ ನಡೆದ ಮೀಟಿಂಗ್‌ನಲ್ಲಿ BSF, ಪಾಕ್‌ ರೇಂಜರ್‌ಗಳ ನಡೆಯನ್ನ ಕಟುವಾಗಿ ವಿರೋಧಿಸಿದೆ ಅಂತ ತಿಳಿದುಬಂದಿದೆ. 2021ರ ಫೆಬ್ರವರಿಯ ಕದನ ವಿರಾಮದ ರಿನ್ಯೂವಲ್‌ ನಂತರ ಪಾಕ್‌ ಮಾಡ್ತಿರೊ ಮೊದಲ ಉಲ್ಲಂಘನೆ ಇದಾಗಿದೆ. ಇದೇ 21 ರಂದು ಸಹ ಪಾಕ್‌ ರೇಂಜರ್‌ಗಳು ಒಂದಷ್ಟು ಜನರನ್ನ ಎಸ್ಕಾರ್ಟ್‌ ಮಾಡ್ಕೊಂಡು ಬಾರ್ಡರ್‌ ಬಳಿಗೆ ಕರೆತಂದಿದ್ರು. ಆಗಲೂ BSF ಜವಾನರು ಗಾಳಿಯಲ್ಲಿ ಗುಂಡು ಹಾರಿಸಿ ವಾರ್ನಿಂಗ್‌ ಕೊಟ್ಟು ಅವರನ್ನ ಓಡಿಸಿದ್ರು. ಪಾಕಿಸ್ತಾನ ಹೀಗೆ ಗಡಿಯಲ್ಲಿ ಪದೇ ಪದೇ ಕದನ ವಿರಾಮ ಬ್ರೇಕ್‌ ಮಾಡ್ತಿರೋದ್ರಿಂದ ಬಾರ್ಡರ್‌ ಸಮೀಪದ ಹಳ್ಳಿಗಳ ಜನರು ಸಹ ಭಯದಲ್ಲಿದ್ದಾರೆ. ಕಳೆದ ಗುರುವಾರ ರಾತ್ರಿ ಅವರು ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಹೋಗೋ ಪರಿಸ್ಥಿತಿ ಕೂಡ ಬಂದಿತ್ತು.

-masthmagaa.com

Contact Us for Advertisement

Leave a Reply