ಬೆಂಗಳೂರು ಕಂಬಳ ಕ್ರೇಜ್‌ಗೆ ಮೆರಗು ತಂದ ಕಾಂತಾರ ಕೋಣಗಳು!

masthmagaa.com:

ಇದೇ ಮೊದಲ ಬಾರಿಗೆ ಕರಾವಳಿಯ ಕಂಬಳ ಸಿಲಿಕಾನ್‌ ಸಿಟಿಯಲ್ಲಿ ಅದ್ದೂರಿಯಾಗಿ ನಡೀತಿದೆ. ಅರಮನೆ ಮೈದಾನದಲ್ಲಿ ಆಯೋಜಿಸಲಾದ ಕಂಬಳ ಆಟಕ್ಕೆ ಸಿನಿ ದಿಗ್ಗಜರ ದಂಡು ರಂಗು ತಂದಿದ್ರೆ ಇನ್ನೊಂದೆಡೆ ಕಾಂತಾರ ಚಿತ್ರದ ಕೋಣಗಳು ವಿಶೇಷ ಮೆರಗನ್ನು ನೀಡಿವೆ. ಕಂಬಳ ವೀಕ್ಷಕರನ್ನ ತನ್ನತ್ತ ಆಕರ್ಷಿಸುತ್ತಿರುವ ಕಾಂತರ ಚಿತ್ರದ ಕೋಣಗಳು ಕಂಬಳ ಕ್ರೇಜ್‌ನ್ನು ಇನ್ನಷ್ಟು ಜಾಸ್ತಿ ಮಾಡಿವೆ. ಈ ಸ್ಪರ್ಧೆಯಲ್ಲಿ ಈ ಕಾಂತಾರ ಖ್ಯಾತಿಯ ಅಪ್ಪು-ಕಿಟ್ಟು ಎಂಬ ಕೋಣಗಳು ಆರೂವರೆ ಅಡಿ ನೀರು ಚಿಮ್ಮಿಸಿ ಚಿನ್ನದ ಪದಕ ಗೆದ್ದುಕೊಂಡಿದ್ದು, ಕೋಣಗಳ ಮಾಲೀಕ ಪರಮೇಶ್ವರ ಭಟ್‌ ಸಂತಸ ವ್ಯಕ್ತಪಡಿಸಿದ್ದು, ಆ ಕೋಣಗಳಿಂದ ಜನ ನನ್ನನ್ನ ಗುರುತಿಸುತ್ತಿದ್ದಾರೆ ಅಂತ ಹೇಳಿದ್ದಾರೆ. ಅಂದ್ಹಾಗೆ ಭಾರತದ ಸಿನಿಮಾ ಲೋಕದಲ್ಲೇ ಧೂಳೆಬ್ಬಿಸಿದ್ದ ವೃಷಭ್‌ ಶೆಟ್ಟಿಯ ಕಾಂತಾರ ಚಿತ್ರದಿಂದಲೇ ಈ ಕಂಬಳ ಆಟ ಎಷ್ಟೋ ಜನರಿಗೆ ಪರಿಚಯವಾಗಿತ್ತು.

-masthmagaa.com

Contact Us for Advertisement

Leave a Reply