ರಾಜ್ಯದ 23 ಕ್ಷೇತ್ರಗಳಲ್ಲಿ NDAಗೆ ಗೆಲುವು: C ವೋಟರ್‌ ಸಮೀಕ್ಷೆ!

masthmagaa.com:

ಲೋಕಸಭಾ ಚುನಾವಣೆಗೆ ಬೆರಳಣಿಕೆ ದಿನಗಳು ಉಳಿದಿರೋ ನಡುವೆಯೇ C ವೋಟರ್‌ ಸಂಸ್ಥೆ ತನ್ನ ಸಮೀಕ್ಷೆ ಪ್ರಕಟ ಮಾಡಿದೆ. ಸ್ಪಷ್ಟ‌ ಬಹುಮತದೊಂದಿಗೆ NDA ಮೈತ್ರಿಕೂಟ ಗೆಲುವು ಸಾಧಿಸಲಿದ್ದು, ಪ್ರಧಾನಿ ನರೇಂದ್ರ ಮೋದಿಯವ್ರು 3ನೇ ಅವಧಿಗೆ ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ಅಧಿಕಾರಕ್ಕೆ ಬರಲಿದ್ದಾರೆ ಅಂತ ಭವಿಷ್ಯ ನುಡಿದಿದೆ. ಒಟ್ಟು 543 ಲೋಕಸಭಾ ಕ್ಷೇತ್ರಗಳ ಪೈಕಿ NDAಗೆ 373 ಸ್ಥಾನ ಸಿಗಲಿದ್ದು, ಶೇಕಡ 46.6% ಮತಗಳನ್ನ ಗಳಿಸುವ ಸಾಧ್ಯತೆ ಇದೆ ಅಂತ ಹೇಳಿದೆ. 2019ರಲ್ಲಿ NDA ವೋಟ್‌ ಶೇರ್‌ 45.1%ರಷ್ಟು ಇತ್ತು. ಈ ಸಲ ಅದಿನ್ನು ಜಾಸ್ತಿಯಾಗುತ್ತೆ ಅಂತ ಹೇಳಿದೆ. ಇನ್ನು ಅತ್ತ ವಿಪಕ್ಷಗಳ ಇಂಡಿಯಾ ಮೈತ್ರಿಕೂಟ 155 ಸ್ಥಾನಕ್ಕಷ್ಟೇ ಸೀಮಿತ ಆಗುವ ನಿರೀಕ್ಷೆ ಇದೆ ಅಂತ ಹೇಳಿದೆ. 2019ರಲ್ಲಿ ಈ ಪಕ್ಷಗಳು 36.6% ಮತ ಪಡೆದಿದ್ವು. ಈ ಬಾರಿ ಮತ ಹಂಚಿಕೆ ಪ್ರಮಾಣ 39.8% ಆಗಲಿದೆ ಅಂತ ಹೇಳಿದೆ. ಆ‍ಂಧ್ರ, ಅಸ್ಸಾಂ ಮತ್ತು ಯುಪಿಯಲ್ಲಿ NDA ಹೆಚ್ಚಿನ ಸ್ಥಾನ ಪಡೆಯುತ್ತೆ. ಅದೇ ರೀತಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡ ಮತ್ತು ಗುಜರಾತ್‌ನಲ್ಲಿ ತನ್ನ ಹಿಡಿತ ಉಳಿಸಿಕೊಳ್ಳುತ್ತೆ ಅಂದಿದೆ. ಇಂಟರೆಸ್ಟಿಂಗ್‌ ಅಂದ್ರೆ ಕರ್ನಾಟಕದ 28 ಸ್ಥಾನಗಳ ಪೈಕಿ NDA 23 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply