ಕ್ರಿಪ್ಟೋ ಕರೆನ್ಸಿ ಬಗ್ಗೆ ದೆಹಲಿಯಲ್ಲಿ ತಜ್ಞರ ಜೊತೆ ಸಭೆ

masthmagaa.com:

ಇನ್ನು ಕ್ರಿಪ್ಟೋ ಫೈನಾನ್ಸ್​ ಬಗ್ಗೆ ಇವತ್ತು ತಜ್ಞರು ಮತ್ತು ಅಸೋಸಿಯೇಷನ್ಸ್​ ಜೊತೆ ಕೇಂದ್ರ ವಿತ್ತ ಸಚಿವಾಲಯದ ಪಾರ್ಲಿಮೆಂಟರಿ ಸ್ಟಾಂಡಿಂಗ್ ಕಮಿಟಿ ಸಭೆ ನಡೆಸಿದೆ. ಸಭೆ ವೇಳೆ ಕ್ರಿಪ್ಟೊಕರೆನ್ಸಿಯನ್ನ ರೆಗ್ಯುಲೇಟ್​ ಮಾಡೋಕೆ ಒಂದು ರೆಗ್ಯುಲೇಟರಿ ಮೆಕಾನಿಸಂ ಇರಬೇಕು ಅಂತ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ಪ್ರಸ್ತುತಪಡಿಸಲಾಯ್ತು. ಆದ್ರೆ ಯಾರು ಅದರ ರೆಗ್ಯುಲೇಟರ್ ಆಗಬೇಕು ಅನ್ನೋದಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆ ಇರಲಿಲ್ಲ ಅಂತ ಮೂಲಗಳು ತಿಳಿಸಿವೆ. ಜೊತೆಗೆ ಹೂಡಿಕೆದಾರರ ಹಣಕ್ಕೆ ಭದ್ರತೆ ಬಗ್ಗೆಯೂ ಗಂಭೀರ ಕಳವಳ ವ್ಯಕ್ತಪಡಿಸಲಾಯ್ತು. ಓರ್ವ ಸಂಸದ ಅಂತೂ ಕ್ರಿಪ್ಟೋಕರೆನ್ಸಿ ಬಗ್ಗೆ ಜಾಹಿರಾತು ಹೆಚ್ಚಾಗ್ತಿರೋ ಬಗ್ಗೆ ಕಳವಳ ವ್ಯಕ್ತಪಡಿಸಿದ್ರು. ಈ ವೇಳೆ ತಜ್ಞರು, ಕ್ರಿಪ್ಟೋಕರೆನ್ಸಿ ಅನ್ನೋದು ಒಂದ್​ರೀತಿ ಹೂಡಿಕೆದಾರರಿಗೆ ಸ್ವಾತಂತ್ರ್ಯ ನೀಡಿದಂತೆ ಅಂತ ಹೇಳಿದ್ದಾರೆ. ಈಗ ಗವರ್ನಮೆಂಟ್​ ಅಫೀಷಿಯಲ್ಸ್​ ಕಮಿಟಿ ಮುಂದೆ ಬರಬೇಕು ಮತ್ತು ತಮ್ಮ ವಿಚಾರವನ್ನ ಮಂಡಿಸಬೇಕು ಅಂತ ಕಮಿಟಿಯ ಸದಸ್ಯರು ಬಯಸಿದ್ದಾರೆ ಅಂತಾನೂ ಮೂಲಗಳು ತಿಳಿಸಿವೆ.

-masthmagaa.com

Contact Us for Advertisement

Leave a Reply