ಕ್ಯಾಪ್ಟನ್‌ಗೇ ಪನಿಶ್‌ಮೆಂಟ್!?: ಸ್ನೇಹತ್ ವಿರುದ್ಧ ತಿರುಗಿಬಿದ್ದ ಬಿಗ್ ಬಾಸ್ ಮನೆ!

masthmagaa.com:

ಬಿಗ್‌ಬಾಸ್‌ ಕನ್ನಡದ ಹತ್ತನೇ ಸೀಸನ್‌ನ ಮೊದಲನೇ ನಾಯಕನಾಗಿ ಸ್ನೇಹಿತ್ ಆಯ್ಕೆಯಾಗಿದ್ದರು. ನಾಯಕನಾದ ಮೇಲೆ ಅವರ ವರ್ತನೆಯೇ ಬದಲಾಗಿದೆ ಎಂದು ಆರಂಭದಲ್ಲಿ ಉಳಿದ ಸ್ಪರ್ಧಿಗಳು ಮಾತಾಡಿಕೊಂಡಿದ್ದರು.

ನಂತರ ಅವರು ತಮ್ಮ ವರ್ತನೆಯನ್ನು ತಿದ್ದಿಕೊಂಡಿದ್ದಾರೆ ಎಂಬ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಆದರೆ ವಾರವಿಡೀ ಹಲವು ಸಂದರ್ಭಗಳಲ್ಲಿ ಅವರು ಕ್ಯಾಪ್ಟನ್‌ ಪಾತ್ರವನ್ನು ನಿರ್ವಹಿಸಿದ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಈಗ ಮನೆಮಂದಿಯೆಲ್ಲ ಸೇರಿ ಸ್ನೇಹಿತ್‌ ಕ್ಯಾಪ್ಟನ್ಸಿಗೆ ಅಂಕಗಳನ್ನು ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಸಕಾರಣ ನೀಡಿ ಅವರನ್ನು ಬಿಗ್‌ಬಾಸ್‌ ಮನೆಯ ಈಜುಕೊಳದಲ್ಲಿ ನೂಕಿದ್ದಾರೆ ಕೂಡ.

ಪ್ರತಿಯೊಬ್ಬರು ನೂಕಿದಾಗಲೂ ನೀರೊಳಗೆ ಬಿದ್ದ ಸ್ನೇಹಿತ್, ಮತ್ತೆ ಎದ್ದುಬಂದು ನಡುಗುತ್ತ ನಿಂತಿದ್ದಾರೆ. ಅವರ ಮೈಯಲ್ಲಿ ನಡುಕವಿದ್ದರೆ ಕಣ್ಣೊಳಗೆ ಅಗ್ರೆಸಿವ್‌ನೆಸ್‌ ಕಾಣಿಸುತ್ತಿದೆ.

ಸ್ನೇಹಿತ್‌ ಕ್ಯಾಪ್ಟನ್ಸಿ ಬಗ್ಗೆ ಯಾವ್ಯಾವ ಸ್ಪರ್ಧಿಗಳು ಎಷ್ಟೆಷ್ಟು ಮಾರ್ಕ್ಸ್‌ ಕೊಟ್ಟಿದ್ದಾರಾ? ಓವರಾಲ್ ಆಗಿ ಕ್ಯಾಪ್ಟನ್‌ ಆಗಿ ಸ್ನೆಹಿತ್ ಗೆದ್ದಿದ್ದಾರಾ? ಸೋತಿದ್ದಾರಾ? ತಿಳಿಯಬೇಕಾದರೆ JioCinemaದಲ್ಲಿ ಬಿಗ್‌ಬಾಸ್‌ ಕನ್ನಡ ನೇರಪ್ರಸಾರ ವೀಕ್ಷಿಸಿ.


ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.
ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಗೆ ವೀಕ್ಷಿಸಿ.

-masthmaga.com

Contact Us for Advertisement

Leave a Reply