ದಿಲ್ಲಿ ಡಿಸಿಎಂ ಮನೀಷ್‌ ಸಿಸೋಡಿಯಾ ಮೇಲೆ ಸಿಬಿಐ ದಾಳಿ: ಆಪ್‌ ಬಿಜೆಪಿ ನಡುವೆ ವಾಕ್ಸಮರ!

masthmagaa.com:

ದೇಶದಲ್ಲಿ ಇತ್ತೀಚೆಗೆ ಆಮ್‌ಆದ್ಮಿ ಮತ್ತು ಬಿಜೆಪಿ ನಡುವಿನ ಜಟಾಪಟಿ ಜೋರಾಗುತ್ತಿದ್ದಂತೆಯೇ ಇವತ್ತು ಸಿಬಿಐ ದಿಲ್ಲಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವ್ರ ಮೇಲೆ ದಾಳಿ ಮಾಡಿದೆ. ಈ ದಾಳಿ ಉಭಯ ಪಕ್ಷಗಳ ನಡುವಿನ ಕಾವನ್ನ ಇನ್ನಷ್ಟು ಹೆಚ್ಚಿಸಿದೆ. ದಿಲ್ಲಿಯ ಹೊಸ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಅಂತ ಆರೋಪಿಸಿ ಕೇಂದ್ರ ತನಿಖಾ ದಳ, ಸಿಬಿಐ ಇವತ್ತು ಮನೀಷ್‌ ಸಿಸೋಡಿಯಾ ಅವ್ರ ನಿವಾಸ ಸೇರಿದಂತೆ ಸುತ್ತಮುತ್ತಲಿನ 21 ಸ್ಥಳಗಳ ಮೇಲೆ ದಾಳಿ ಮಾಡ್ತು. ದಾಳಿಯ ಬೆನ್ನಲ್ಲೇ ಬಿಜೆಪಿ ಮತ್ತು ಆಪ್‌ ನಡುವೆ ವಾಗ್ಯುದ್ದ ಆರಂಭವಾಯ್ತು. ಈ ಬಗ್ಗೆ ಟ್ವೀಟ್‌ ಮಾಡಿದ ಸಿಸೋಡಿಯಾ, ಸಿಬಿಐಗೆ ಸ್ವಾಗತ. ಆದ್ರೆ ಪಿತೂರಿಯಿಂದ ನನ್ನನ್ನ ಕುಗ್ಗಿಸಲು ಆಗಲ್ಲ ಅಂತ ಹೇಳಿದ್ರು. ಇನ್ನು ಅತ್ತ ಅಮೆರಿಕದ ಪ್ರತಿಷ್ಠಿತ ನ್ಯೂಸ್‌ಪೇಪರ್‌ ನ್ಯೂಯಾರ್ಕ್‌ ಟೈಮ್ಸ್‌ ತನ್ನ ಮುಖಪುಟದಲ್ಲಿ ದಿಲ್ಲಿ ಸರ್ಕಾರದ ಎಜುಕೇಷನ್‌ ಮಾಡೆಲ್‌ ಬಗ್ಗೆ ಇವತ್ತೇ ವರದಿ ಮಾಡಿತ್ತು. ಇದನ್ನೇ ಅಸ್ತ್ರವಾಗಿ ಮಾಡಿಕೊಂಡ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಅತ್ತ ಅಮೆರಿಕದ ದೊಡ್ಡ ಪತ್ರಿಕೆಯ ಮುಖಪುಟದಲ್ಲಿ ದಿಲ್ಲಿಯ ಎಜುಕೇಷನ್‌ ಮಾಡೆಲ್‌ನ್ನ ಹೊಗಳಿ ಮನೀಷ್‌ ಸಿಸೋಡಿಯಾ ಅವ್ರ ಚಿತ್ರವನ್ನ ಪ್ರಕಟಿಸಿದ್ರೆ, ಇಲ್ಲಿ ಮನೀಷ್‌ ಅವ್ರ ಮನೆಗೆ ಸಿಬಿಐ ಬಂದಿದೆ ಅಂತ ಕೇಂದ್ರದ ವಿರುದ್ಧ ಹರಿಹಾಯ್ದ್ರು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ, ಆಪ್‌ ಪೇಯ್ಡ್‌ ನ್ಯೂಸ್‌ ಅಂದ್ರೆ ದುಡ್ಡು ಕೊಟ್ಟು ಈ ಲೇಖನಗಳನ್ನ ಬರೆಸಿದೆ. ಒಂದೇ ದಿನ ಎರಡು ಪತ್ರಿಕೆಗಳಲ್ಲಿ ಸೇಮ್‌ ಆರ್ಟಿಕಲ್‌ ಬಂದಿದೆ ಅಂತ ನ್ಯೂಯಾರ್ಕ್‌ ಟೈಮ್ಸ್‌ ಜೊತೆಗೆ ಖಲೀಜಾ ಟೈಮ್ಸ್‌ ಎಂಬ ಪತ್ರಿಕೆಯ ವರದಿಯನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶನ ಮಾಡ್ತು. ಇದಕ್ಕೆ ಮತ್ತೆ ಪ್ರತಿಕ್ರಿಯಿಸಿದ ಆಪ್‌ನ ಸೌರಭ್‌ ಭಾರದ್ವಾಜ್‌, ಹಾಗಿದ್ರೆ ಬಿಜೆಪಿ ತನ್ನಲ್ಲಿರೋ ಎಲ್ಲ ಹಣವನ್ನ ಪವರ್‌ನ್ನ ಯೂಸ್‌ ಮಾಡಿ ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ತನ್ನ ಒಂದು ಆರ್ಟಿಕಲ್‌ ಪಬ್ಲಿಷ್‌ ಮಾಡಿ ತೋರಿಸ್ಲಿ ಅಂತ ಚಾಲೆಂಜ್‌ ಮಾಡಿದ್ರು. ಜೊತೆಗೆ ನ್ಯೂಯಾರ್ಕ್‌ ಟೈಮ್ಸ್‌ನ ವರದಿಯನ್ನೇ ಖಲೀಜಾ ಟೈಮ್ಸ್‌ನವ್ರು ಪ್ರಕಟ ಮಾಡಿದ್ದಾರೆ. ಕೆಳಗಡೆ ನ್ಯೂಯಾರ್ಕ್‌ ಟೈಮ್ಸ್‌ನ ಹೆಸ್ರು ಸೇರ್ಸಿ ಕ್ರೆಡಿಟ್ಸ್‌ ಕೂಡ ಕೊಟ್ಟಿದ್ದಾರೆ ನೋಡಿ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply