ದೇಶದ ಅತಿದೊಡ್ಡ ನಕಲಿ ಗನ್​​ ಲೈಸೆನ್ಸ್ ಜಾಲ ಬೇಧಿಸಿದ ಖಾಕಿಪಡೆ!

masthmagaa.com:

ಜಮ್ಮು ಕಾಶ್ಮೀರ ಮತ್ತು ದೆಹಲಿಯ ಒಟ್ಟು 40 ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ರೇಡ್ ಮಾಡಿ ದೇಶದ ಅತಿದೊಡ್ಡ ಗನ್ ಲೈಸೆನ್ಸ್ ರ್ಯಾಕೆಟ್ ಬೇಧಿಸಲಾಗಿದೆ. ಶ್ರೀನಗರದಲ್ಲಿ ಐಎಎಸ್ ಅಧಿಕಾರಿ ಶಾಹಿದ್ ಇಕ್ಬಾಲ್ ಚೌಧರಿ ಮನೆ ಮೇಲೂ ದಾಳಿ ನಡೆದಿದೆ. ಈತ ಸಾವಿರಾರು ಮಂದಿಗೆ ನಕಲಿ ಗನ್​ ಲೈಸೆನ್ಸ್ ಕೊಡಿಸಿದ್ದ ಅಂತ ಗೊತ್ತಾಗಿದೆ. ಈತ ಮಾತ್ರ ಅಲ್ಲ.. ಇತರೆ 8 ಮಂದಿ ಡೆಪ್ಯುಟಿ ಕಮಿಷನರ್​​ಗಳ ಮೇಲೂ ದಾಳಿ ನಡೆಸಲಾಗಿದೆ. 2012ರಿಂದ ಈವರೆಗೆ ಜಮ್ಮು ಕಾಶ್ಮೀರದಿಂದ 2 ಲಕ್ಷ ಮಂದಿಗೆ ಗನ್​ ಲೈಸೆನ್ಸ್​ ನೀಡಲಾಗಿದ್ದು, ಇದು ಭಾರತದ ಅತಿದೊಡ್ಡ ನಕಲಿ ಗನ್​ಲೈಸೆನ್ಸ್ ರ್ಯಾಕೆಟ್​ ಅಂತ ನಂಬಲಾಗಿದೆ. ಇನ್ನು ಜಮ್ಮು ಕಾಶ್ಮೀರದ ಬಂಡಿಪೋರಾದಲ್ಲಿ ಯೋಧರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಓರ್ವ ಯೋಧನಿಗೂ ಗಾಯಗಳಾಗಿವೆ.

-masthmagaa.com

Contact Us for Advertisement

Leave a Reply