ಸಿಬಿಎಸ್​​ಇ ಫಲಿತಾಂಶ ಪ್ರಕಟಕ್ಕೆ ಇದ್ದ ಗಡುವು ವಿಸ್ತರಣೆ!

masthmagaa.com:

ಸಿಬಿಎಸ್​ಇ 12ನೇ ತರಗತಿ ಫಲಿತಾಂಶವನ್ನ ಫೈನಲೈಸ್​ ಮಾಡಲು ಜುಲೈ 22ರವರೆಗೆ ಇದ್ದ ಗಡುವನ್ನ ಜುಲೈ 25ಕ್ಕೆ ವಿಸ್ತರಿಸಲಾಗಿದೆ. ಇನ್ನು ಪ್ರೈವೆಟ್​ ಕೆಟಗರಿಯ ವಿದ್ಯಾರ್ಥಿಗಳಿಗೆ ಸುಪ್ರೀಂಕೋರ್ಟ್ ಸೂಚಿಸಿದಂತೆ ಆಗಸ್ಟ್​ 16ರಿಂದ ಸೆಪ್ಟೆಂಬರ್ 15ರ ನಡುವೆ ಪರೀಕ್ಷೆ ನಡೆಸಲಾಗುತ್ತೆ ಅಂತ ಸಿಬಿಎಸ್​ಇ ತಿಳಿಸಿದೆ. ಅಂದ್ಹಾಗೆ ಕೊರೋನಾ ಹಿನ್ನೆಲೆ ಸಿಬಿಎಸ್​ಇ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನ ಈಗಾಗಲೇ ರದ್ದು ಮಾಡಲಾಗಿದೆ. ಆದ್ರೆ ರಿಪೀಟರ್ಸ್ ಅಥವಾ ನಾವು ಪರೀಕ್ಷೆ ಬರೆದೇ ಪಾಸ್​ ಆಗ್ತೀವಿ ಅನ್ನೋ ವಿದ್ಯಾರ್ಥಿಗಳನ್ನ ಪ್ರೈವೆಟ್​ ಕೆಟಗರಿ ವಿದ್ಯಾರ್ಥಿಳು ಅಂತಾರೆ. ಈ ವಿದ್ಯಾರ್ಥಿಗಳ ರಿಸಲ್ಟ್ ಬಂದ ಬಳಿಕವೇ ಕಾಲೇಜುಗಳಲ್ಲಿ ಯುಜಿಸಿ ಅಡ್ಮಿಷನ್ ಪ್ರಕ್ರಿಯೆ ಶುರು ಮಾಡಲಿದೆ ಅಂತ ಸಿಬಿಎಸ್​ಸಿ ತಿಳಿಸಿದೆ.

-masthmagaa.com

Contact Us for Advertisement

Leave a Reply