ಏಪ್ರಿಲ್‌ 29ರ ಒಳಗೆ ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ಮಾಡ್ತೀವಿ: ಕೇಂದ್ರ!

masthmagaa.com:

ರಾಜ್ಯದ ಬರಪರಿಹಾರ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಗುದ್ದಾಟಕ್ಕೆ ಒಂದು ಚಿಕ್ಕ ಅಂತ್ಯ ಸಿಕ್ಕಂತೆ ಕಾಣ್ತಿದೆ. ಈಗ ಏಪ್ರಿಲ್‌ 29ರ ಒಳಗೆ ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ಮಾಡ್ತೀವಿ ಅಂತ ಕೇಂದ್ರ ಸರ್ಕಾರ ಸುಪ್ರೀಕೋರ್ಟ್‌ಗೆ ತಿಳಿಸಿದೆ. ಅಂದ್ಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣಭೈರೇಗೌಡ 2023ರ ಡಿಸೆಂಬರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ರಾಜ್ಯದಲ್ಲಿ 236 ರಲ್ಲಿ 223 ತಾಲ್ಲೂಕುಗಳು ಬರಪೀಡಿತವಾಗಿವೆ ಅಂತ ಹೇಳಿದ್ರು. ಇದಕ್ಕಾಗಿ 18,177.44 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ರು. ಈ ಪೈಕಿ 4663 ಕೋಟಿ ರೂಪಾಯಿ ಇನ್‌ಪುಟ್‌ ಸಬ್ಸಿಡಿ, 12,577 ಕೋಟಿ ರೂಪಾಯಿ ತುರ್ತು ಪರಿಹಾರದ ಬೇಡಿಕೆ ಇಡಲಾಗಿತ್ತು. ಜೊತೆಗೆ 566 ಕೋಟಿ ರೂಪಾಯಿ ಕುಡಿಯುವ ನೀರಿಗಾಗಿ ಹಾಗೂ 363 ಕೋಟಿ ರೂಪಾಯಿ ಜಾನುವಾರುಗಳ ಸಂರಕ್ಷಣೆಗಾಗಿ ಒದಗಿಸುವಂತೆ ಮನವಿ ಮಾಡಿದ್ರು. ಆದ್ರೆ ಕೇಂದ್ರ ಸರ್ಕಾರ ಬರಪರಿಹಾರ ವಿಳಂಬ ಮಾಡ್ತಿದೆ ಅಂತೇಳಿ ಕೆಲವಾರಗಳ ಹಿಂದೆ ರಾಜ್ಯ ಸರ್ಕಾರ ಸುಪ್ರಿಂ ಕೋರ್ಟ್‌ ಮೆಟ್ಟಿಲೇರಿತ್ತು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿತ್ತು. ಈಗ ಶೀಘ್ರದಲ್ಲೇ ಬರಪರಿಹಾರ ನೀಡ್ತೀವಿ ಅಂತ ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್​​​​ ವೆಂಕಟರಮಣಿ ಹೇಳಿದ್ದಾರೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತಾಡಿದ್ದಾರೆ. ನಮ್ಮ ರೈತರನ್ನ 7 ತಿಂಗಳು ಸತಾಯಿಸಿದ್ರು. ರೂಲ್ಸ್‌ ಪ್ರಕಾರ 1ತಿಂಗಳ ಒಳಗೇ ಪರಿಹಾರ ಕೊಡಬೇಕು. ಈಗ ಕೊಡ್ತೀವಿ ಅಂತ ಒಪ್ಪಿಕೊಂಡಿದ್ದಾರೆ ಅಂತ ಹೇಳಿದಾರೆ.

-masthmagaa.com

Contact Us for Advertisement

Leave a Reply