ದೇಶದಲ್ಲಿ ಮಹಾದೇವ್‌ ಬೆಟ್ಟಿಂಗ್‌ ಆ್ಯಪ್‌ ಜೊತೆ 22 ಆ್ಯಪ್‌ಗಳ ಬ್ಯಾನ್‌!

masthmagaa.com:

ಮಹಾದೇವ್‌ ಬೆಟ್ಟಿಂಗ್‌ ಆ್ಯಪ್‌ ಸೇರಿದಂತೆ 22 ಅಕ್ರಮ ಆ್ಯಪ್‌ಗಳನ್ನ ಬ್ಯಾನ್‌ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಜಾರಿ ನಿರ್ದೇಶನಾಲಯದ (ಇಡಿ) ಮನವಿಯ ಮೇಲೆ ಆ್ಯಪ್‌ಗಳನ್ನ ಬ್ಯಾನ್‌ ಮಾಡೋ ನಿರ್ಧಾರವನ್ನ ಕೇಂದ್ರ ಮಾಡಿದೆ. ಚತ್ತೀಸ್‌ಗಢದಲ್ಲಿ ಮಹಾದೇವ್‌ ಆನ್‌ಲೈನ್‌ ಬುಕಿಂಗ್‌ ಮೇಲೆ ನಡೆಸಿದ್ದ ತನಿಖೆಯಲ್ಲಿ ಮಹಾದೇವ್‌ ಆ್ಯಪ್‌ ಅಕ್ರಮ ಕಾರ್ಯಚರಣೆಯನ್ನ ನಡೆಸ್ತಾ ಇದ್ದ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಹಾಗಂತ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

-masthmagaa.com

Contact Us for Advertisement

Leave a Reply