ಜಮ್ಮು-ಕಾಶ್ಮೀರ: ತೆಹ್ರೀಕ್‌-ಎ-ಹುರಿಯತ್‌ ಬ್ಯಾನ್‌ ಮಾಡಿದ ಕೇಂದ್ರ!

masthmagaa.com:

ಜಮ್ಮು-ಕಾಶ್ಮೀರದಲ್ಲಿ ಪೂಂಚ್‌ ದಾಳಿ ಬೆನ್ನಲ್ಲೇ ಇದೀಗ ಕೆಲ ಪ್ರತ್ಯೇಕತಾವಾದಿ ಸಂಘಟನೆಗಳನ್ನ ಬ್ಯಾನ್‌ ಮಾಡೋ ಕಡೆ ಕೇಂದ್ರ ಹೆಜ್ಜೆ ಹಾಕಿದೆ. ಕೆಲ ದಿನಗಳ ಹಿಂದಷ್ಟೇ ಮುಸ್ಲಿಂ ಲೀಗ್‌ ಜಮ್ಮು ಕಾಶ್ಮೀರ (ಮಸರತ್‌ ಆಲಮ್‌ ಬಣ)ವನ್ನ ಬ್ಯಾನ್‌ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಪ್ರತ್ಯೇಕತಾವಾದಿ ಸಂಘಟನೆ ತೆಹ್ರೀಕ್‌-ಎ-ಹುರಿಯತ್‌ನ್ನ ಬ್ಯಾನ್‌ ಮಾಡಿದೆ. ಇದೊಂದು ಕಾನೂನು ವಿರೋಧಿ ಸಂಘಟನೆಯಾಗಿದೆ ಅಂತೇಳಿ ಕೇಂದ್ರ ಸರ್ಕಾರ ಬ್ಯಾನ್‌ ಮಾಡೋ ನಿರ್ಧಾರ ತೆಗೆದ್ಕೊಂಡಿದೆ. ಈ ಬಗ್ಗೆ ಮಾತನಾಡಿರೋ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ʻಜಮ್ಮು & ಕಾಶ್ಮೀರವನ್ನ ಭಾರತದಿಂದ ಸಪರೇಟ್‌ ಮಾಡಿ ಇಸ್ಲಾಂ ಕಾನೂನು ಸ್ಥಾಪಿಸೋಕೆ ನಡೆಸಲಾದ ನಿಷೇಧಿತ ಚಟುವಟಿಕೆಯಲ್ಲಿ ಈ ಸಂಘಟನೆ ಸೇರ್ಕೊಂಡಿದೆ. ಈ ಗುಂಪು ದೇಶ ವಿರೋಧಿ ವಿಷಯಗಳನ್ನ ಸ್ಪ್ರೆಡ್‌ ಮಾಡಿದೆ. ಜೊತೆಗೆ ಭಾರತದಲ್ಲಿ ಪ್ರತ್ಯೇಕತಾವಾದವನ್ನ ಹೆಚ್ಚಿಸೋಕೆ ಭಯೋತ್ಪಾದನಾ ಚಟುವಟಿಕೆಗಳನ್ನ ಮುಂದುವರೆಸ್ತಿರೋದು ಕಂಡು ಬಂದಿದೆʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply