ಬಿಕ್ಕಟ್ಟಿನಲ್ಲಿ ವಿಸ್ತಾರ ಏರ್‌ಲೈನ್ಸ್‌! ಸಹಾಯಕ್ಕೆ ಬಂದ ಕೇಂದ್ರ ಸರ್ಕಾರ!

masthmagaa.com:

ಇತ್ತೀಚೆಗೆ ಭಾರೀ ಬಿಕ್ಕಟ್ಟು ಎದುರಿಸ್ತಿರೋ ಭಾರತದ ವಿಸ್ತಾರ ಏರ್‌ಲೈನ್ಸ್‌ ಇಂದು ಬೆಳಿಗ್ಗೆ ಪುನಃ… ಕನಿಷ್ಠ ತನ್ನ 38 ಫ್ಲೈಟ್‌ಗಳನ್ನ ಕ್ಯಾನ್ಸಲ್‌ ಮಾಡಿದೆ. ಪೈಲಟ್‌ಗಳ ಅಲಭ್ಯತೆಯಿಂದಾಗಿ ಮುಂಬೈನಿಂದ ಟೇಕ್‌ ಆಫ್‌ ಆಗ್ಬೇಕಿದ್ದ 15 ಫ್ಲೈಟ್‌ಗಳು, ದೆಹಲಿಯಿಂದ 12 ಫ್ಲೈಟ್‌ಗಳು ಮತ್ತು ಬೆಂಗಳೂರಿನಿಂದ 11 ಫ್ಲೈಟ್‌ಗಳು ದಿಢೀರ್‌ ಆಗಿ ಕ್ಯಾನ್ಸಲ್‌ ಆಗಿವೆ. ನೆನ್ನೆಯಷ್ಟೇ…ಏಪ್ರಿಲ್‌ 01ರಂದು ಬರೋಬ್ಬರಿ 50ಕ್ಕೂ ಅಧಿಕ ವಿಸ್ತಾರ ಫ್ಲೈಟ್‌ಗಳು ಕ್ಯಾನ್ಸಲ್‌ ಆಗಿದ್ದು, ಸುಮಾರು 160 ಫ್ಲೈಟ್‌ಗಳು ಡಿಲೇ ಆಗಿದ್ವು. ಸೋ ವಿಸ್ತಾರ ಏರ್‌ಲೈನ್ಸ್‌ನ ಸಂಕಷ್ಟ ಬಗೆಹರಿಸೋಕೆ ಈಗ ಕೇಂದ್ರ ಸರ್ಕಾರ ಎಂಟ್ರಿ ಕೊಟ್ಟಿದೆ. ಸಿವಿಲ್‌ ಏವಿಯೇಷನ್‌ ಮಿನಿಸ್ಟರ್‌ ಜ್ಯೋತಿರಾದಿತ್ಯ ಸಿಂಧಿಯಾ ಇದೀಗ ವಿಸ್ತಾರ ಬಳಿ ಫ್ಲೈಟ್‌ ಕ್ಯಾನ್ಸಲ್‌ ಮತ್ತು ಡಿಲೇ ಆಗಿರೋ ಬಗ್ಗೆ ವಿವರವಾದ ರಿಪೋರ್ಟ್‌ ಕೇಳಿದ್ದಾರೆ.

-masthmagaa.com

Contact Us for Advertisement

Leave a Reply