ಚಂದ್ರಯಾನ-3ರ ಲ್ಯಾಂಡಿಂಗ್‌ ಸೈಟ್‌ಗೆ ʻಶಿವ ಶಕ್ತಿʼ ಹೆಸರು ಅಧಿಕೃತ!

masthmagaa.com:

ಇಸ್ರೋದ ಯಶಸ್ವಿ ಯೋಜನೆ ಚಂದ್ರಯಾನ-3 ಕುರಿತು ಹೊಸ ಅಪ್ಡೇಟ್‌ ಸಿಕ್ಕಿದೆ. ಚಂದ್ರಯಾನ-3 ಮಿಷನ್‌ನ ಲ್ಯಾಂಡಿಂಗ್‌ ಸೈಟ್‌ಗೆ ನೀಡಲಾಗಿದ್ದ ʻಶಿವ ಶಕ್ತಿʼ ಹೆಸರಿಗೆ ಇಂಟರ್‌ನ್ಯಾಷನಲ್‌ ಆಸ್ಟ್ರೋನಾಮಿಕಲ್‌ ಯುನಿಯನ್‌ (IAU) ಅಪ್ರೂವ್‌ ನೀಡಿದೆ. ಹೀಗಂತ Gazetteer of Planetary Nomenclature ಕನ್ಫರ್ಮೇಷನ್‌ ನೀಡಿದೆ. ಈ ಮೂಲಕ ಚಂದ್ರಯಾನ-3 ಮಿಷನ್‌ ಅಡಿಯಲ್ಲಿ ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡರ್‌ ಲ್ಯಾಂಡ್‌ ಆಗಿರೋ ಜಾಗಕ್ಕೆ ʻಶಿವ ಶಕ್ತಿʼ ಅನ್ನೋ ಹೆಸರು ಅಧಿಕೃತವಾಗಿದೆ. ಅಂದ್ಹಾಗೆ ಪ್ರಧಾನಿ ಮೋದಿಯವ್ರು ಕಳೆದ ವರ್ಷ ಆಗಸ್ಟ್‌ 26ಕ್ಕೆ ಈ ಲ್ಯಾಂಡಿಂಗ್‌ ಸೈಟ್‌ಗೆ ʻಶಿವ ಶಕ್ತಿʼ ಅಂತ ಕರೆಯಲಾಗುತ್ತೆ ಅಂತ ಅನೌನ್ಸ್‌ ಮಾಡಿದ್ರು. ಈ ರೀತಿ ಹೇಳಿ 7 ತಿಂಗಳ ನಂತ್ರ ಇದೀಗ ಹೆಸರಿಗೆ ಅನುಮೋದನೆ ಸಿಕಿದೆ.

-masthmagaa.com

Contact Us for Advertisement

Leave a Reply