ಚಂದ್ರಯಾನ-3 ನೌಕೆ ಈಗ ಎಲ್ಲಿದೆ?

masthmagaa.com:

ಚಂದ್ರನ ಅಂಗಳಕ್ಕೆ ಇಳಿಯುವ ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3ರ ಬಾಹ್ಯಾಕಾಶ ನೌಕೆ, ತನ್ನ ಎರಡನೇ orbit-raising manoeuvre ಪೂರ್ಣಗೊಳಿಸಿದೆ. ಇಲ್ಲಿ ಆರ್ಬಿಟ್‌ ರೈಸಿಂಗ್‌ ಮ್ಯಾನುವರ್‌ ಅಂದ್ರೆ ಪಥ ಬದಲಿಸೋದು ಅಂತ ಅರ್ಥ… ಈಗ ಬಾಹ್ಯಾಕಾಶ ನೌಕೆ ಚಂದ್ರನತ್ತ ಹೋಗ್ಬೇಕಂದ್ರೆ ಭೂಮಿಯ ಗುರುತ್ವಾಕರ್ಷಣ ಬಲವನ್ನ ಮೀರಿದ ಬಲವನ್ನ ಪಡೀಬೇಕು. ಇದನ್ನ ಎಸ್ಕೇಪ್‌ ವೆಲಾಸಿಟಿ ಅಂತ ಹೇಳ್ತೀವಿ. ಸೋ ಈ ಎಸ್ಕೇಪ್‌ ವೆಲಾಸಿಟಿ ವೇಗ ಸಿಗೋವರೆಗು ನೌಕೆ ಭೂಮಿಯ ಸುತ್ತ ಸುತ್ತುತಾ ಇರುತ್ತೆ. ಪ್ರತಿ ಸುತ್ತಿಗೂ ನೌಕೆಯ ವೇಗ ಜಾಸ್ತಿ ಆಗುತ್ತೆ, ಜೊತೆಗೆ ಭೂಮಿಯಿಂದ ದೂರವಾಗ್ತಾ ಹೋಗುತ್ತೆ. ಸೋ ಈಗ ಆ ರೀತಿ 2 ಸುತ್ತು ಹಾಕಿ 3ನೇ ಸುತ್ತಿಗೆ ಕಕ್ಷೆ ಬದಲಿಸಲಾಗಿದೆ ಅಂತ ಇಸ್ರೋ ಹೇಳಿದೆ. ಚಂದ್ರಯಾನ ನೌಕೆ ಈಗ ಭೂಮಿಗೆ ಹತ್ತಿರವಿದ್ದಾಗ 226 ಕಿ.ಮೀ ಹಾಗು ದೂರವಿದ್ದಾಗ 41,603 ಕಿ.ಮೀ ಇರುವ ಕಕ್ಷೆಯಲ್ಲಿದೆ. ನಾಳೆ ಮಧ್ಯಾಹ್ನ 2ರಿಂದ 3 ಗಂಟೆಯ ಸಮಯದಲ್ಲಿ ನೌಕೆ ಭೂಮಿಗೆ ಮತ್ತೆ ಹತ್ತಿರ ಬರಲಿದ್ದು ಆಗ ಮತ್ತೆ ಎಂಜಿನ್‌ಗಳನ್ನ ಫೈರ್‌ ಮಾಡಲಿದ್ದೇವೆ ಅಂತ ಇಸ್ರೋ ಹೇಳಿದೆ. ಬೆಂಗಳೂರಿನಲ್ಲಿರುವ ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್​ ಮತ್ತು ಕಮಾಂಡ್​ ನೆಟ್​ವರ್ಕ್ ಸೆಂಟರ್​ನಿಂದ ಆರ್ಬಿಟ್‌ ರೈಸಿಂಗ್‌ ಪ್ರಕ್ರಿಯೆಯನ್ನ ಯಶಸ್ವಿಯಾಗಿ ನಿರ್ವಹಣೆ ಮಾಡಲಾಗಿದೆ. ಇನ್ನು ಅತ್ತ ಸಂದರ್ಶನ ಒಂದ್ರಲ್ಲಿ ಮಾತಾಡಿರೋ ಕೇಂದ್ರ ಬಾಹ್ಯಾಕಾಶ ಸಚಿವ ಜಿತೇಂದ್ರ ಸಿಂಗ್‌, ಚಂದ್ರಯಾನ-3 ಚಂದ್ರಯಾನ-1 ಬಿಟ್ಟಲ್ಲಿಂದ ಕೆಲಸ ಶುರು ಮಾಡುತ್ತೆ, ಚಂದ್ರನ ಮೇಲೆ ಜೀವಿಗಳಿಗೆ ಪೂರಕ ವಾತಾವರಣ, ಸಂಪನ್ಮೂಲಗಳು ಇದೆಯಾ ಅಂತ ನೋಡುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply