ಗೌತಮ್ ಗಂಭೀರ್ ವಿರುದ್ಧ ಚಾರ್ಜ್‍ಶೀಟ್..!

ವಂಚನೆ ಪ್ರಕರಣವೊಂದ್ರಲ್ಲಿ ಮಾಜಿ ಕ್ರಿಕೆಟಿಗ, ಹಾಲಿ ಸಂಸದ ಗೌತಮ್ ಗಂಭೀರ್ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ. ಗೌತಮ್ ಗಂಭೀರ್ ಮಾತ್ರ ಅಲ್ಲ ಅವರ ಜೊತೆ ಇನ್ನೂ ಹಲವರ ವಿರುದ್ಧ ದೆಹಲಿ ಪೊಲೀಸರು ಚಾರ್ಚ್ ಶೀಟ್ ಸಲ್ಲಿಸಿದ್ದಾರೆ. ಈ ಹಿಂದೆ ಗೌತಮ್ ಗಂಭೀರ್ ಬ್ರಾಂಡ್ ಅಂಬಾಸಿಡರ್ ಆಗಿದ್ದ ರಿಯಲ್ ಎಸ್ಟೇಟ್ ಸಮೂಹ ರುದ್ರ ಬಿಲ್ಡ್ ವೆಲ್ ಯೋಜನೆಯ ವಿರುದ್ಧ ವಂಚನೆ, ದುರುಪಯೋಗ ಮತ್ತು ಸಂಚು ರೂಪಿಸಿದ ಆರೋಪ ಕೇಳಿಬಂದಿತ್ತು. ಪ್ರಕರಣ ಸಂಬಂಧ ಎಫ್‍ಐಆರ್ ದಾಖಲಿಸಿದ್ದ ದೆಹಲಿ ಪೊಲೀಸರು ಈಗ ಚಾರ್ಜ್‍ಶೀಟ್ ದಾಖಲಿಸಿದ್ದಾರೆ. 2011ರಲ್ಲಿ ರುದ್ರ ಸಮೂಹ ಸಂಸ್ಥೆ ಫ್ಲಾಟ್ ನಿರ್ಮಾಣ ಮಾಡೋದಾಗಿ ಹೇಳಿಕೆ ಕೋಟಿಗಟ್ಟಲೆ ಹಣ ಹೂಡಿಕೆ ಮಾಡ್ಕೊಂಡು ಉಂಡೇನಾಮ ತಿಕ್ಕಿತ್ತು. ಹೀಗಾಗಿ ಜನ ಕಂಪನಿ ವಿರುದ್ಧ ದೂರು ನೀಡಿದ್ದರು. ಆದ್ರೆ ಈ ಕಂಪನಿಗೆ ಗೌತಮ್ ಬ್ರಾಂಡ್ ಅಂಬಾಸಿಡರ್ ಆಗಿದ್ದರಿಂದ ಈಗ ತಗಲಾಕ್ಕೊಂಡಿದ್ದಾರೆ.

2016ರಲ್ಲಿ ಕಂಪನಿ ವಿರುದ್ಧ ದೂರು ದಾಖಲಾಗಿದ್ದು ಗೌತಮ್ ಗಂಭೀರ್ ಅವರು ರುದ್ರ ಬಿಲ್ಡ್ ವೆಲ್ ರಿಯಾಲಿಟಿ ಕಂಪನಿಯ ಬ್ರಾಂಡ್ ಅಂಬಾಸೆಡರ್ ಜೊತೆ ನಿರ್ದೇಶಕನೂ ಆಗಿದ್ದರಿಂದ ಅವರ ವಿರುದ್ಧ ದೂರು ದಾಖಲಾಗಿತ್ತು.

Contact Us for Advertisement

Leave a Reply