ಶಿವಾಜಿ ಪ್ರತಿಮೆಗೆ ಕಾಂಗ್ರೆಸ್‌ ವಿರೋಧ! ತುಳುನಾಡಿನ ಯೋಧರ ಪ್ರತಿಮೆ ಸ್ಥಾಪಿಸಿ ಎಂದು ಸಲಹೆ!

masthmagaa.com:

ಮಂಗಳೂರಿನಲ್ಲಿ ಶಿವಾಜಿ ಪ್ರತಿಮೆ ನಿರ್ಮಾಣಕ್ಕೆ ಕಾಂಗ್ರೆಸ್‌ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಛತ್ರಪತಿ ಶಿವಾಜಿ ಮರಾಠ ಅಸೋಸಿಯೇಷನ್‌ನ ಬೇಡಿಕೆಯನ್ನು ಪರಿಗಣಿಸಿ ಇಲ್ಲಿನ ಮಹಾವೀರ್ ಅಥವಾ ಪಂಪ್‌ವೆಲ್ ವೃತ್ತದಲ್ಲಿ ಶಿವಾಜಿ ಪ್ರತಿಮೆ ಸ್ಥಾಪಿಸುವ ಕಾರ್ಯಸೂಚಿಯನ್ನು ಅಕ್ಟೋಬರ್ 29 ರಂದು ಮಂಗಳೂರು ಪಾಲಿಕೆ ತನ್ನ ಸಭೆಯಲ್ಲಿ ಅನುಮೋದಿಸಿತ್ತು. ಬುಧವಾರ ಕೌನ್ಸಿಲ್ ಸಭೆ ಸೇರಿದಾಗ, ವಿರೋಧ ಪಕ್ಷದ ನಾಯಕ ನವೀನ್ ಡಿಸೋಜಾ ಕರ್ನಾಟಕದ ವಿರುದ್ಧ MES ಮಾಡ್ತಿರೋ ಪುಂಡಾಟವನ್ನ, ಅವರ ನಿಲುವನ್ನ ಎತ್ತಿಹಿಡಿದು ಈ ಶಿವಾಜಿ ಪ್ರತಿಮೆ ನಿರ್ಮಿಸೋಕೆ ವಿರೋಧಿಸಿದ್ದಾರೆ. ಕನ್ನಡ ಗಡಿಯಲ್ಲಿ ಶಾಂತಿ ಕದಡೋಕೆ MES ಯತ್ನಿಸುತ್ತಿರುವ ಸಂದರ್ಭದಲ್ಲಿ ನಗರದಲ್ಲಿ ಶಿವಾಜಿ ಪ್ರತಿಮೆ ಸ್ಥಾಪಿಸುವುದು ಸರಿಯಲ್ಲ. ಶಿವಾಜಿ ಪ್ರತಿಮೆಯ ಬದಲು ತುಳುನಾಡಿನ ಅವಳಿ ಯೋಧರಾದ ಕೋಟಿ-ಚೆನ್ನಯರ ಪ್ರತಿಮೆ ಸ್ಥಾಪಿಸಬಹುದು ಅಂತ ಸಲಹೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply