ಪಠ್ಯ ಪರಿಷ್ಕರಣೆ ಮುಗಿಯದ ಕಗ್ಗಂಟು: ಮಕ್ಕಳ ಕೈ ಸೇರುತ್ತಿಲ್ಲ ಪಠ್ಯ ಪುಸ್ತಕ!

masthmagaa.com:

ಪಠ್ಯಪುಸ್ತಕದ ವಿಚಾರವಾಗಿ ರಾಜ್ಯಸರ್ಕಾರದ ರಾದ್ದಾಂತ ಸದ್ಯಕ್ಕೆ ಮುಗಿಯೋ ಲಕ್ಷಣ ಕಾಣಿಸ್ತಿಲ್ಲ. ಪಠ್ಯಪರಿಷ್ಕರಣೆ ವಿಚಾರದಲ್ಲಿ ಭಾರಿ ಟೀಕೆಗೆ ಗುರಿಯಾಗಿದ್ದ ರಾಜ್ಯಸರ್ಕಾರ ಸದ್ಯ ಅದರ ಸಮರ್ಥನೆಯಲ್ಲಿಯೇ ಮುಳುಗಿದೆ. ಶಾಲಾ ಶೈಕ್ಷಣಿಕ ವರ್ಷ ಆರಂಭವಾಗಿ ಈಗಾಗಲೇ ಹಲವು ವಾರಗಳು ಕಳೀತಾ ಬರ್ತಿವೆ. ಆದ್ರೆ ಪಠ್ಯ ಪುಸ್ತಕ ಮಾತ್ರ ಇನ್ನೂ ಮಕ್ಕಳ ಕೈ ಸೇರಿಲ್ಲ. ತುಂಬಾ ವಿಳಂಬವಾಗ್ತಿದೆ ಅಂತ ವಿಧ್ಯಾರ್ಥಿಗಳು ಹಾಗೂ ಶಿಕ್ಷಕರು ಸರ್ಕಾರದ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ಅಲ್ದೇ ಸರ್ಕಾರ ಬಿಡುಗಡೆ ಮಾಡಿರೋ ಪಿಡಿಎಫ್‌ ಕೂಡ ಸರಿಯಿಲ್ಲ. ಅದನ್ನ ಬಳಸುವಂತಿಲ್ಲ ಅಂತ ವಾಟರ್‌ ಮಾರ್ಕ್‌ ಹಾಕಿದ್ದಾರೆ. ಇದರಿಂದ ವಿಧ್ಯಾರ್ಥಿಗಳು, ಶಿಕ್ಷಕರು ಹೇಳ್ತಿರೋ ಬಾಯಿಪಾಠಗಳ ಮೇಲೆ ಅವಲಂಬಿತರಾಗಿದ್ದಾರೆ ಅಂತ ದೂರಲಾಗ್ತಿದೆ. ಇತ್ತ ಇನ್ನೊಂದು ಕಡೆ ರೋಹಿತ್‌ ಚಕ್ರತೀರ್ಥ ನೇತೃತ್ವದಲ್ಲಿ ಮಾಡಿರೋ ಪರಿಷ್ಕರಣೆಯನ್ನ ಮಗದೊಮ್ಮೆ ಪರಿಶೀಲನೆ ಮಾಡೋಕೆ ಹೊಸ ಸಮಿತಿ ರಚಿಸೋದಕ್ಕೆ ರಾಜ್ಯಸರ್ಕಾರ ಚಿಂತನೆ ನಡೆಸಿದೆ ಅನ್ನೋ ವರದಿ ಕೂಡ ಕೇಳಿ ಬರ್ತಿದೆ.

-masthmagaa.com

Contact Us for Advertisement

Leave a Reply