ಭೂತಾನ್‌ ಬಾರ್ಡರ್‌ನಲ್ಲಿ ತಲೆಯತ್ತಿವೆ ಚೀನೀಯರ ನಾಲ್ಕಾರು ಊರುಗಳು!

masthmagaa.com:

ಕಿತಾಪತಿ ಚೀನಾದ ಕುತಂತ್ರ ಬುದ್ದಿ ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಬಡತನ ನಿವಾರಣೆ, ಬಡವರಿಗೆ ನೆರವು ಅನ್ಕೊಂಡು ಭೂತಾನ್‌ ಬಾರ್ಡರ್‌ನಲ್ಲಿ ಗ್ರಾಮಗಳನ್ನ ನಿರ್ಮಿಸ್ತಿದೆ. ಇತ್ತೀಚೆಗಷ್ಟೆ ಚೀನಾ ಹಾಗೂ ಭೂತಾನ್‌ ತಮ್ಮ ಬಾರ್ಡರ್‌ನ ಡೀಲಿಮಿಟೇಶನ್‌ ಹಾಗೂ ಡೀಮಾರ್ಕೇಶನ್‌ ಒಪ್ಪಂದಕ್ಕೆ ಸೈನ್‌ ಮಾಡಿದ್ವು. ಇದರ ನಡುವೆಯೂ ಹೊಟ್ಟೆಬಾಕ ಚೀನಾ ವಿವಾದಿತ ಪ್ರದೇಶದಲ್ಲಿ.. ಇನ್ನೂ ಬೌಂಡರಿ ಡಿಸೈಡ್‌ ಆಗದ ತಾಮಲುಂಗ್‌ ಪ್ರದೇಶದಲ್ಲಿ ಹೊಸದಾಗಿ ಮೂರು ಹಳ್ಳಿಗಳನ್ನ ನಿರ್ಮಾಣ ಮಾಡಿದೆ. ಈ ವಿಚಾರವನ್ನ ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿ ಮಾಡಿದೆ. ಈ ರಿಪೋರ್ಟ್‌ನಲ್ಲಿ ಚೀನಾ ನಿರ್ಮಿಸಿರೋ ಮನೆಗಳಿಗೆ ಈಗಾಗ್ಲೆ ಚೀನಾ ನಿವಾಸಿಗಳು ಬರ್ತಿದ್ದಾರೆ ಅಂತ ಹೇಳಿದೆ. ಕಳೆದ ಡಿಸೆಂಬರ್‌ 28ರಲ್ಲೇ ಮೊದಲ ಬ್ಯಾಚ್‌ನ ಜನರು ಇಲ್ಲಿನ ಮನೆಗಳಿಗೆ ಬಂದಿದ್ರು ಅಂತ ಪತ್ರಿಕೆ ಹೇಳಿದೆ. ಇನ್ನು ಅಮೆರಿಕ ಮೂಲದ ಮಕ್ಸಾರ್‌ ಟೆಕ್ನಾಲಜಿಸ್‌ ರಿಲೀಸ್‌ ಮಾಡಿರೋ ಸ್ಯಾಟಲೈಟ್‌ ಇಮೇಜ್‌ಗಳಲ್ಲಿಯೂ ಇದು ಬಯಲಾಗಿದೆ. ಒಟ್ಟಾರೆಯಾಗಿ 147 ಮನೆಗಳು ಈ ಭಾಗದಲ್ಲಿ ಇರೋದು ಗೊತ್ತಾಗಿದೆ. ಅಲ್ಲಿನ ಲೋಕಲ್‌ ಟಿಬೆಟಿಯನ್‌ ಅಧಿಕಾರಿಗಳು ಈ ಊರುಗಳನ್ನ ಫಾಸ್ಟಾಗಿ ಎಕ್ಸ್‌ಪ್ಯಾಂಡ್‌ ಮಾಡೋಕೆ ಉತ್ತೇಜನ ಕೊಡ್ತಿದ್ದಾರೆ ಅಂತ ಮಾರ್ನಿಂಗ್‌ ಪೋಸ್ಟ್‌ ವರದಿ ಮಾಡಿದೆ. ಇನ್ನು ಚೀನಾದ ಈ ನಡೆ ಭಾರತಕ್ಕೆ ಆತಂಕಕಾರಿ..ಯಾಕಂದ್ರೆ, ಭಾರತ, ಚೀನಾ, ಭೂತಾನ್‌ ಗಡಿಯ ಡೋಕ್ಲಮ್‌ ಪ್ರದೇಶ ಕೂಡ ಇದಕ್ಕೆ ಹತ್ತಿರದಲ್ಲೇ ಬರುತ್ತೆ. ಪಶ್ಚಿಮ ಬಂಗಾಳದಲ್ಲಿ ಚಿಕನ್ ನೆಕ್‌ ಅಂತಾನೇ ಕರೆಯಲಾಗೋ ಸಿಲಿಗುರಿ ಕಾರಿಡಾರ್‌ನ ಸೆಕ್ಯೂರಿಟಿ ರೀಸನ್ಸ್‌ನಿಂದ‌ಲೂ ಇದು ಮಹತ್ವ ಪಡ್ಕೊಳ್ಳುತ್ತೆ. ಅಲ್ಲಿ ಚೀನಾ ಗ್ರಾಮಗಳ ಮೂಲಕ ತನ್ನ ಸೇನಾ ಚಟುವಟಿಕೆಗಳನ್ನ ಮಾಡ್ಬೋದು. ಹೀಗಾಗಿ ಸ್ಟಾಟಜಿಕ್‌ ಕಾರಣದಿಂದ ಇದು ಭಾರತಕ್ಕೆ ಎಚ್ಚರಿಕೆ ಎಂತಲೇ ಪರಿಗಣಿಸಬೇಕು. ಇನ್ನು ಚೀನಾದ ಈ ನಡೆಯ ಬಗ್ಗೆ ಭಾರತವಾಗಲೀ, ಚೀನಾದ ಸರ್ಕಾರ ಆಗಲೀ ಅಥವಾ ಭೂತಾನ್‌ನ ಸರ್ಕಾರವಾಗಲೀ ಅಧಿಕೃತವಾಗಿ ಏನೂ ಹೇಳಿಲ್ಲ. ಬಟ್‌ ಚೀನಾದ ಮಾಧ್ಯಮಗಳೇ ಇದರ ಬಗ್ಗೆ ರಿಪೋರ್ಟ್‌ ಮಾಡಿವೆ.

-masthmagaa.com

Contact Us for Advertisement

Leave a Reply