ಚೀನಾದಲ್ಲಿ ಸೋಂಕಿತರ ಮೇಲೆ ಕಣ್ಣಿಡ್ತಿದೆ ರೋಬೋಟ್‌ ನಾಯಿಗಳು!

masthmagaa.com:

ಚೀನಾದಲ್ಲಿ ಕೊರೋನಾ ಸ್ಪೋಟಗೊಳ್ತಾ ಇರೋದ್ರ ಜೊತೆಗೆ ಅಲ್ಲಿನ ಸರ್ಕಾರದ ವಿರುದ್ಧ ಜನರ ಆಕ್ರೋಶವು ಸ್ಪೋಟಗೊಳ್ತಾ ಇದೆ. ಕೊರೋನಾ ಕೇಸ್‌ ಹೆಚ್ಚಾಗಿರುವ ಶಾಂಘೈ ಸೇರಿದಂತೆ ವಿವಿಧ ನಗರಗಳಲ್ಲಿ ರಾಷ್ಟ್ರಗೀತೆಯನ್ನ ಬಳಸಿಕೊಂಡೇ ಜನ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದಾರೆ. ಚೀನಾ ರಾಷ್ಟ್ರಗೀತೆಯಾದ “Arise, ye who refuse to be slaves”.. ಅಂದ್ರೆ ‘ಗುಲಾಮರಾಗಲು ನಿರಾಕರಿಸುವವರೇ ಎದ್ದೇಳಿ’ ಅನ್ನುವ ಸಾಲನ್ನ ಹ್ಯಾಶ್‌ ಟ್ಯಾಗ್‌ ಮೂಲಕ ಅಥವಾ ಬೇರೆ ಬೇರೆ ರೀತಿಯಲ್ಲಿ ಬಳಸಿಕೊಂಡು ಅಭಿಯಾನ ನಡೆಸ್ತಿದ್ದಾರೆ. ಅದನ್ನ ಚೀನಾ ಸೆನ್ಸಾರ್​ ಮಾಡ್ತಿದೆ. ಅಂಥಾ ಹ್ಯಾಶ್​​ಟ್ಯಾಗ್​​ಗಳನ್ನ ಸೋಶಿಯಲ್‌ ಮೀಡಿಯಾಗಳಿಂದ ತೆಗೆದುಹಾಕ್ತಿದೆ. ಜೀರೋ ಕೋವಿಡ್‌ ಪಾಲಿಸಿಗೆ ಚೀನಾ ಅದೆಷ್ಟೇ ಶತಾಯಗತಾಯ ಪ್ರಯತ್ನಪಟ್ರೂ ಅದು ಸಾಧ್ಯವಾಗ್ತಿಲ್ಲ. ಹಾಗಾಗಿ ಜನರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಡ್ರೋನ್‌ ಮೂಲಕ, ರೋಬೋಟ್‌ ನಾಯಿಗಳ ಮೂಲಕ, ಪೊಲೀಸರ ಮೂಲಕ ಜನ ಮನೆಯಿಂದ ಹೊರಗೆ ಬಾರದಂತೆ ನೋಡಿಕೊಳ್ತಾ ಇದೆ. ಕೆಲವು ಕಡೆ ಆಹಾರ, ವಸ್ತುಗಳನ್ನ ತಲುಪಿಸಲು ರೋಬೋಟ್‌ಗಳನ್ನೇ ಬಳಸ್ತಾ ಇದೆ. ಆದ್ರೆ ಜನ ಮಾತ್ರ ಸರಿಯಾಗಿ ಆಹಾರ, ಆರೋಗ್ಯ ಸೌಲಭ್ಯ ಸಿಗ್ತಿಲ್ಲ ಅಂತ ಸಿಟ್ಟಿಗೆದ್ದಿದ್ಧಾರೆ. ಅಂದ್ಹಾಗೆ ಚೀನಾದಲ್ಲಿ ಕಳೆದ 24 ಗಂಟೆಯಲ್ಲಿ 21,355 ಕೊರೋನಾ ಕೇಸ್​ ದೃಢಪಟ್ಟಿದೆ. ಇದರಲ್ಲಿ ರೋಗದ ಲಕ್ಷಣ ಇರೋ 2,971 ಕೇಸ್​​ಗಳನ್ನ ಮಾತ್ರ ಚೀನಾ ಪಾಸಿಟಿವ್​ ಅಂತ ಪರಿಗಣಿಸುತ್ತೆ. ಕಳೆದ 24 ಗಂಟೆಯಲ್ಲಿ 12 ಸಾವು ಸಂಭವಿಸಿದೆ. ಎಲ್ಲವೂ ಶಾಂಘೈನಲ್ಲೇ. ಒಟ್ಟಾರೆ ಚೀನಾದಲ್ಲಿ ದೃಢಪಡುತ್ತಿರೋ ಕೊರೋನಾ ಕೇಸ್​​ಗಳಲ್ಲಿ 95 ಪರ್ಸೆಂಟ್​ಗೂ ಹೆಚ್ಚು ಶಾಂಘೈನಲ್ಲೇ ವರದಿಯಾಗ್ತಿದೆ.

-masthmagaa.com

Contact Us for Advertisement

Leave a Reply