ಚೀನಾ ಮೂನ್‌ ಮಿಷನ್‌ನಲ್ಲಿ ಭಾಗಿಯಾಗೋಕೆ ಇತರ ದೇಶ ಹಾಗೂ ಸಂಸ್ಥೆಗಳಿಗೆ ಆಹ್ವಾನ!

masthmagaa.com:

ಭಾರತದ ಯಶಸ್ವಿ ಚಂದ್ರಯಾನದ ಬೆನ್ನಲ್ಲೇ ಅತ್ತ ಚೀನಾ ಕೂಡ ಲುನಾರ್‌ ಮಿಷನ್‌ ಮಾಡೋಕೆ ಮುಂದಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಖಾಯಂ ನೆಲೆಯನ್ನ ಸ್ಥಾಪಿಸೋ ಗುರಿ ಹೊಂದಿರೊ ಚೀನಾದ ಲುನಾರ್‌ ಮಿಷನ್‌ ಲಾಂಚ್‌ ಮಾಡೋಕೆ ಡೆಡ್‌ಲೈನ್‌ ಹತ್ತಿರವಾಗ್ತಿದೆ. ಹೀಗಾಗಿ ಮಿಷನ್‌ನ್ನ ಬೇಗ ಕಂಪ್ಲೀಟ್‌ ಮಾಡೋಕೆ ಇದೀಗ, ಚೀನಾ ಇತರ ದೇಶಗಳ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಕಾರವನ್ನ ಕೋರಿದೆ. ಚೀನಾ ನ್ಯಾಷನಲ್‌ ಸ್ಪೇಸ್‌ ಅಡ್ಮಿಮಿಸ್ಟ್ರೇಶನ್‌ (CNSA) ಜೊತೆ ಸೇರಿ ʻChang’e-8ʼ ಸಿಬ್ಬಂದಿ ರಹಿತ ಮಿಷನ್‌ನ ಪ್ರಾಜೆಕ್ಟ್‌ಗಳನ್ನ ಮಾಡಲು ಆಹ್ವಾನ ನೀಡಿದೆ. ಅಸಕ್ತಿ ಇದ್ದೋರು CNSAಗೆ ಈ ವರ್ಷ ಡಿಸೆಂಬರ್‌ 31ರ ಒಳಗೆ ಲೆಟರ್‌ ಕಳಿಸಬೇಕು. ಅವನ್ನ ಪರಿಶೀಲಿಸಿ, 2024 ಅಂದ್ರೆ ಮುಂದಿನ ವರ್ಷ ಸೆಪ್ಟಂಬರ್‌ನಲ್ಲಿ ಸಂಸ್ಥೆಗಳನ್ನ ಫೈನಲ್‌ ಮಾಡಲಾಗುತ್ತೆ ಅಂತ ಹೇಳಲಾಗಿದೆ. ‌

-masthmagaa.com

Contact Us for Advertisement

Leave a Reply