ಚೀನಾ-ಪಾಕ್‌ ಎಕನಾಮಿಕ್‌ ಕಾರಿಡಾರ್‌ಗೆ ರೆಡಿಯಾದ ಚೀನಾ!

masthmagaa.com:

ಚೀನಾ-ಪಾಕ್‌ ಎಕನಾಮಿಕ್‌ ಕಾರಿಡಾರ್‌ (Cpec) ಯೋಜನೆ ಕುರಿತು ಇದೀಗ ಆ್ಯಕ್ಷನ್‌ ತೆಗೆದುಕೊಳ್ಳೋದಾಗಿ ಚೀನಾ ಹೇಳ್ಕೊಂಡಿದೆ. ʻಉಭಯ ದೇಶಗಳ ರಾಜಕೀಯ ನಂಬಿಕೆಗಳನ್ನ ಇನ್ನಷ್ಟು ಸ್ಟ್ರಾಂಗ್‌ ಮಾಡಿ, ಸಹಕಾರವನ್ನ ವಿಸ್ತರಿಸೋಕೆ ಚೀನಾ ಪಾಕ್‌ ಜೊತೆ ಕೆಲಸ ಮಾಡುತ್ತೆ. Cpec ಯೋಜನೆ ಅಪ್‌ಗ್ರೇಡ್‌ ಮಾಡೋಕೆ ರೆಡಿ ಇದೆʼ ಅಂತ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್‌ ವೆನ್ಬಿನ್‌ ಹೇಳಿದ್ದಾರೆ. ಅಂದ್ಹಾಗೆ ಈ ಯೋಜನೆ ಪಾಕ್‌ನ ಬಲೋಚಿಸ್ತಾನ್‌ ಪ್ರಾಂತ್ಯದ ಗ್ವಾದರ್‌ ಪೋರ್ಟ್‌ ಮತ್ತು ಚೀನಾದ ಷಿನ್‌ಜಿಯಾಂಗ್‌ ಪ್ರಾಂತ್ಯವನ್ನ ಕನೆಕ್ಟ್‌ ಮಾಡುತ್ತೆ. ಆದ್ರೆ ಈ ಕಾರಿಡಾರ್‌ ನಿರ್ಮಾಣಕ್ಕೆ ಮಾತ್ರ ಭಾರತದಿಂದ ತೀವ್ರ ವಿರೋಧವಿದೆ. ಯಾಕಂದ್ರೆ ಈ ಕಾರಿಡಾರ್‌ ಪಾಕ್‌ ಆಕ್ರಮಿತ ಕಾಶ್ಮೀರದಿಂದ ಹಾದು ಹೋಗುತ್ತೆ.

-masthmagaa.com

Contact Us for Advertisement

Leave a Reply