ಪಾಕ್‌ಗೆ ಸಾಲ ನೀಡಲು ಚೀನಾ ಸಿದ್ದ! 16.6 ಸಾವಿರ ಕೋಟಿ ರೂ. ಡೀಲ್‌!

masthmagaa.com:

ಆರ್ಥಿಕ ಬಿಕ್ಕಟ್ಟಿನಲ್ಲಿರೋ ಪಾಕಿಸ್ತಾನ ಇದ್ದಬದ್ದ ಕಡೆಯೆಲ್ಲಾ ಕೈಚಾಚಿ… ಸಾಲ ಮಾಡೋಕೆ ಮುಂದಾಗ್ತಿದೆ. ಇದೀಗ ಪಾಕ್‌ನ ಮಿತ್ರ ರಾಷ್ಟ್ರವಾಗಿರೋ ಚೀನಾ ಪಾಕಿಸ್ತಾನಕ್ಕೆ ಹಣಸಹಾಯ ಮಾಡೋಕೆ ಒಪ್ಪಿಕೊಂಡಿದೆ. ಒಟ್ಟು 2 ಬಿಲಿಯನ್‌ ಡಾಲರ್‌ ಅಂದ್ರೆ 16.6 ಸಾವಿರ ಕೋಟಿ ರೂಪಾಯಿ ಸಾಲ ನೀಡೋಕೆ ಚೀನಾ ಮುಂದಾಗಿದೆ. ಹೀಗಂತ ಖುದ್ದು ಪಾಕ್‌ ಉಸ್ತುವಾರಿ ಹಣಕಾಸು ಸಚಿವೆ ಶಂಶಾದ್‌ ಅಖ್ತರ್‌ ಮಾಹಿತಿ ನೀಡಿದ್ದಾರೆ. ಅಂದ್ಹಾಗೆ ಚೀನಾ ಬಳಿ ಪಾಕ್‌ ಸಾಲ ಮಾಡೋದು ಇದೇನು ಮೊದಲ ಬಾರಿಯೇನಲ್ಲ… ಈ ಹಿಂದೆ ಸಾಕಷ್ಟು ಬಾರಿ ಪಾಕ್‌ ಸಾಲ ಕೇಳಿದೆ. 2000-2021ರ ಅವಧಿಯಲ್ಲಿ ಪಾಕ್‌ ಒಟ್ಟು ಚೀನಾದಿಂದ 67.2 ಬಿಲಿಯನ್‌ ಡಾಲರ್‌ ಅಂದ್ರೆ 5.5 ಲಕ್ಷ ಕೋಟಿ ರೂಪಾಯಿ ಸಾಲ ಪಡೆದಿದೆ ಅಂತ ಅಮೆರಿಕದ AidData ರಿಸರ್ಚ್‌ ಸಂಸ್ಥೆಯೊಂದು ಸ್ಟಡಿ ನಡೆಸಿ ರಿಪೋರ್ಟ್‌ ಮಾಡಿತ್ತು. ಈ ಅವಧಿಯಲ್ಲಿ ಪಾಕಿಸ್ತಾನದ ಒಟ್ಟು 433 ಯೋಜನೆಗಳಿಗೆ ಚೀನಾ ಹಣಸಹಾಯ ಮಾಡಿದೆ ಅಂತೇಳಾಗ್ತಿದೆ. ಕೇವಲ ಚೀನಾ ಮಾತ್ರವಲ್ಲ… ಸೌದಿ ಅರೇಬಿಯಾ, ಯುಎಇ ಮುಂದೇನೂ ಸದಾ ಆರ್ಥಿಕ ಬಿಕ್ಕಟ್ಟಿನಲ್ಲಿರೋ ಪಾಕ್‌ ಕೈಚಾಚ್ತಲೇ ಬಂದಿದೆ. ಇನ್ನು ಇಂಟರ್‌ನ್ಯಾಷನಲ್‌ ಮಾನಿಟರಿ ಫಂಡ್‌ (IMF) ಬಳಿ ಸಾಲ ಕೇಳೋದು ಪಾಕ್‌ಗೆ ಒಂದ್‌ ರೀತಿ ಚಾಳಿ ಆಗ್ಬಿಟ್ಟಿದೆ. 1958ರಿಂದ ಸುಮಾರು 23 ಬಾರಿ ಪಾಕಿಸ್ತಾನ IMF ಬಳಿ ಸಾಲ ಪಡೆದಿದೆ. ಈ ಮೂಲಕ IMF ನಿಂದ ಸಾಲ ಪಡೆದ 5ನೇ ದೊಡ್ಡ ಸಾಲಗಾರ ಅನ್ನೋ ಪಟ್ಟಿ ಕೂಡ ಪಾಕ್‌ ಪಾಲಾಗಿದೆ ಅಂತ ಹೇಳಲಾಗುತ್ತೆ.

-masthmagaa.com

Contact Us for Advertisement

Leave a Reply