ಮೂವರು ಗಗನಯಾತ್ರಿಗಳನ್ನ ಟಿಯಾಂಗ್‌ಗಾಂಗ್‌ ಬಾಹ್ಯಾಕಾಶ ನಿಲ್ದಾಣಕ್ಕೆ ಕಳಿಸಿದ ಚೀನಾ!

masthmagaa.com:

ಚೀನಾ ತನ್ನ ಟಿಯಾಂಗ್‌ಗಾಂಗ್‌ ಬಾಹ್ಯಾಕಾಶ ನಿಲ್ದಾಣಕ್ಕೆ ಮೂವರು ಗಗನಯಾತ್ರಿಗಳನ್ನ ಕಳುಹಿಸಿದೆ. ಈ ದಶಕದ ಕೊನೆಯ ವೇಳೆಗೆ ಚಂದ್ರನ ಬಳಿಗೆ ಮಾನವರನ್ನ ಕಳುಹಿಸಲು ಚೀನಾ ಯೋಜನೆ ಹಾಕಿಕೊಂಡಿದ್ದು, ಅದರ ಭಾಗವಾಗಿ ಇದೇ ಮೊದಲ ಬಾರಿಗೆ ಗಗನಯಾತ್ರಿಗಳನ್ನ ಕಕ್ಷೆಗೆ ಕಳುಹಿಸಿದೆ. ಇನ್ನು ಮೂವರು ಗಗನಯಾತ್ರಿಗಳಿದ್ದ ʻShenzhou-16ʼ ಸ್ಪೇಸ್‌ಕ್ರಾಫ್ಟ್‌ನ್ನ ಹೊತ್ತ ʻLong March 2Fʼ ರಾಕೆಟ್‌ ಇಂದು ಆಕಾಶಕ್ಕೆ ಹಾರಿದೆ. ಉಡಾವಣೆ ಉಶಸ್ವಿಯಾಗಿದ್ದು, ಗಗನಯಾತ್ರಿಗಳು ಉತ್ತಮ ಸ್ಥಿತಿಯಲ್ಲಿದ್ದಾರೆ ಅಂತ ಜಿಯುಕ್ವಾನ್‌ ಉಪಗ್ರಹ ಉಡಾವಣಾ ಕೇಂದ್ರದ ನಿರ್ದೇಶಕ ಝೌ ಲಿಪೆಂಗ್‌ ಹೇಳಿದ್ದಾರೆ. ಅಂದ್ಹಾಗೆ ಮಾನವರನ್ನ ಕಕ್ಷೆಗೆ ಕಳುಹಿಸಿದ ಮೂರನೇ ದೇಶವಾಗಿ ಚೀನಾ ಹೊರಹೊಮ್ಮಿದೆ.

-masthmagaa.com

Contact Us for Advertisement

Leave a Reply