ಚೀನಾದಲ್ಲಿ ಬೆಲೆ ಕುಸಿತ, ಎಲ್ಲಾ ಉಲ್ಟಾಪಲ್ಟಾ!

masthmagaa.com:

ಜಾಗತಿಕವಾಗಿ ಹಲವು ರಾಷ್ಟ್ರಗಳು ಹಣದುಬ್ಬರವನ್ನ ಫೇಸ್‌ ಮಾಡ್ತಿದ್ರೆ ಚೀನಾ ಮಾತ್ರ ಇದಕ್ಕೆ ವಿರುದ್ಧವಾಗಿ deflation, ಹಣದ ಇಳಿತವನ್ನ ಫೇಸ್‌ ಮಾಡ್ತಿದೆ. ಹಣದುಬ್ಬರ ಇಳಿತ ಅಥ್ವಾ deflation ಅಂದ್ರೆ ಎಲ್ಲಾ ಸರಕುಗಳ ಬೆಲೆ ಸಡನ್‌ ಇಳಿಕೆಯಾಗೋದು. ಹೇಗೆ inflation ವೇಳೆ ಎಲ್ಲಾ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುತ್ತೋ deflationನಲ್ಲಿ ಅದಕ್ಕೆ ವಿರುದ್ಧವಾಗಿರೋ ಆರ್ಥಿಕ ಪರಿಸ್ಥಿತಿ ಎದುರಾಗುತ್ತೆ. ಜೂನ್‌ ತಿಂಗಳ ಅಂಕಿಅಂಶಗಳ ಪ್ರಕಾರ ಹಣದುಬ್ಬರದಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಆದ್ರೆ ಈಗ ಚೀನಾದ ಇನ್ಫ್ಲೇಶನ್‌ ದರ ಏಕ್‌ದಂ 0.6% ನಿಂದ 0.4% ಇಳಿಕೆಯಾಗಿದೆ. ಕಳೆದ ವರ್ಷಕ್ಕೆ ಇದನ್ನ ಕಂಪೇರ್‌ ಮಾಡಿದ್ರೆ ಸರಕುಗಳ ಬೆಲೆ 5.4% ಇಳಿಕೆ ಕಂಡಿದೆ ಅಂತ National Bureau of Statistics ರಿಲೀಸ್‌ ಮಾಡಿರೋ ಡೇಟಾದಿಂದ ತಿಳಿದು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಜೂನ್‌ನಲ್ಲಿ ಮಾಂಸದ ಬೆಲೆ 7.2% ಕುಸಿತ ಕಂಡಿದೆ. ಈ ಹಿನ್ನಲೆಯಲ್ಲಿ ಮಾಂಸದ ಡಿಮ್ಯಾಂಡ್‌ ಹಾಗೂ ಬೆಲೆಯನ್ನ ಹೆಚ್ಚಿಸೋಕೆ ಚೀನಾ ಸರ್ಕಾರ ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಅಂದ್ಹಾಗೆ ಚೀನಾದಲ್ಲಿ ಡಿಫ್ಲೇಶನ್‌ ರಿಸ್ಕ್‌ ಹೆಚ್ಚಾಗ್ತಿರೋದು ನಿಜ ಹಾಗೂ ಇದ್ರಿಂದ ಆರ್ಥಿಕತೆ ಮೇಲೆ ಕೆಟ್ಟ ಪರಿಣಾಮ ಬೀಳಲಿದೆ ಅಂತ Pinpoint Asset Management Ltd ಚೀಫ್‌ ಎಕನಾಮಿಸ್ಟ್‌ ಝಾಂಗ್‌ ಝಿವೀ ಕೂಡ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply