ಕಲ್ಲಿದ್ದಲು ಖಾಲಿಯಾಗಿ ಕೆಂಪು ಕಂಟ್ರಿ ಕಂಗಾಲು! ಕರೆಂಟೇ ಇಲ್ಲ!

masthmagaa.com:

ಚೀನಾದಲ್ಲಿ ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್ ಕೊರತೆ ಎದುರಾಗಿದೆ. ಹೀಗಾಗಿ ದೇಶದ ಕಲ್ಲಿದ್ದಲು ಗಣಿಗಾರಿಕಾ ಘಟಕಗಳಿಗೆ ಕಲ್ಲಿದ್ದಲು ಉತ್ಪಾದನೆಯನ್ನು ಜಾಸ್ತಿ ಮಾಡುವಂತೆ ಚೀನಾ ಸರ್ಕಾರ ಆದೇಶಿಸಿದೆ. ಚೀನಾಧ ಇನ್ನರ್ ಮಂಗೋಲಿಯಾ ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಮಾಡಲಾಗುತ್ತೆ. ಈ ಭಾಗದ ಸುಮಾರು 72 ಗಣಿಗಾರಿಕಾ ಕಂಪನಿಗಳಿಗೆ 9.8 ಕೋಟಿ ಟನ್​​​​​ನಷ್ಟು ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸುವಂತೆ ಆದೇಶಿಸಲಾಗಿದೆ. ಇದ್ರ ಆದೇಶದ ನೋಟಿಸ್ ಸಾರ್ವಜನಿಕವಾಗಿ ರಿಲೀಸ್ ಆಗಿಲ್ಲ. ಅಂದಹಾಗೆ ಚೀನಾದ 60 ಪರ್ಸೆಂಟ್​​ನಷ್ಟು ವಿದ್ಯುತ್ ಆಧಾರಿತ ಆರ್ಥಿಕತೆ ಕಲ್ಲಿದ್ದಲನ್ನೇ ಅವಲಂಬಿಸಿವೆ. ಸದ್ಯ ಚೀನಾದಲ್ಲಿ ಕಲ್ಲಿದ್ದಲು ಕೊರತೆಯಿಂದಾಗಿ ದೊಡ್ಡಮಟ್ಟದಲ್ಲಿ ವಿದ್ಯುತ್ ಕಡಿತ ಸಂಭವಿಸಿದ್ದು, ಕಾರ್ಖಾನೆಗಳಲ್ಲಿ ಉತ್ಪಾದನೆಯ ಪ್ರಮಾಣ ಕಡಿಮೆಯಾಗ್ತಿದೆ. ಅದೇ ರೀತಿ ಬ್ಯುಸಿನೆಸ್​ಗಳಿಗೆ ವಿದ್ಯುತ್​ನ್ನು ಬಳಕೆಯನ್ನು ಕಡಿಮೆ ಮಾಡಿ ಅಂತ ಸೂಚಿಸಲಾಗಿದೆ.

-masthmagaa.com

Contact Us for Advertisement

Leave a Reply