ಚೀನಾದಲ್ಲಿ ಕೊರೋನಾ ಲಾಕ್​ಡೌನ್! ಎಷ್ಟು ಮಂದಿಗೆ ಬಂದಿದೆ ಕೊರೋನಾ?

masthmagaa.com:

ಚೀನಾದ ಯಾವುದಾದ್ರೂ ನಗರದಲ್ಲಿ ಹತ್ತಿಪ್ಪತ್ತು ಕೊರೋನಾ ಕೇಸ್​ ಬಂದ್ರೆ ಸಾಕು ಆ ನಗರವನ್ನ ಲಾಕ್​​ಡೌನ್ ಮಾಡಿ, ಬಂದ್​ ಮಾಡ್ಕೊಂಡ್​ ಬಿಡ್ತಾರೆ. ಇವತ್ತು ಸುಮಾರು 40 ಲಕ್ಷ ಜನಸಂಖ್ಯೆ ಇರೋ ಲಾನ್​ಝೌ ನಗರವನ್ನ ಲಾಕ್​ಡೌನ್ ಮಾಡಲಾಗಿದೆ. ಇದು ಗನ್ಷು ಪ್ರಾಂತ್ಯದ ರಾಜಧಾನಿ. ಅಂದ್ಹಾಗೆ ಇಲ್ಲಿ ಇವತ್ತು ಪತ್ತೆಯಾಗಿರೋದು ಜಸ್ಟ್ ಆರೇ ಆರು ಕೊರೋನಾ ಕೇಸ್​. ಆದ್ರೂ ಇಡೀ ನಗರವನ್ನ ಲಾಕ್​ಡೌನ್ ಮಾಡಿ, ತೀರಾ ಅವಶ್ಯಕತೆ ಇಲ್ಲದೆ ಯಾರೂ ಕೂಡ ಮನೆಯಿಂದ ಹೊರಬರದಂತೆ ಆದೇಶ ಹೊರಡಿಸಲಾಗಿದೆ. ಲಾನ್​ಝೌ ನಗರಕ್ಕೆ ಬಸ್​, ರೈಲು ಸಂಚಾರ ಮತ್ತು ವಿಮಾನ ಹಾರಾಟವನ್ನ ಸ್ಥಗಿತಗೊಳಿಸಲಾಗಿದೆ. ಕೊರೋನಾಗೆ ಸಂಬಂಧಿಸಿದಂತೆ ಚೀನಾದ್ದು ಝೀರೋ ಕೋವಿಡ್​​ ಪಾಲಿಸಿ. ಒಂದೇ ಒಂದು ಕೇಸ್​ ಕೂಡ ಬರಬಾರ್ದು ಅಂತ. ಆದ್ರೂ ಕಳೆದ 24 ಗಂಟೆಯಲ್ಲಿ ಚೀನಾದಲ್ಲಿ 43 ಕೇಸ್​ ವರದಿಯಾಗಿದೆ. ಇದರಲ್ಲಿ 29 ಸ್ಥಳೀಯ ಕೇಸ್​, 14 ಹೊರ ದೇಶದಿಂದ ಬಂದಿರೋದಾಗಿದೆ. ಚೀನಾದಲ್ಲಿ ನಿಧಾನವಾಗಿ ಹೆಚ್ಚಾಗ್ತಿರೋ ಕೊರೋನಾ ಪ್ರಕರಣಗಳಿಗೆ ಡೆಲ್ಟಾ ರೂಪಾಂತರಿಯೇ ಕಾರಣ. ಹೊಸ ಔಟ್​​ಬ್ರೇಕ್​​ನಲ್ಲಿ ಅಕ್ಟೋಬರ್​ 17ರಿಂದ ಇಲ್ಲಿವರೆಗೆ 198 ಕೇಸ್​ ದೃಢಪಟ್ಟಿದೆ.

-masthmagaa.com

Contact Us for Advertisement

Leave a Reply