ಚೀನಾ: ಕೋವಿಡ್‌ ಸೋಂಕಿಗೆ ಒಂದೇ ವಾರಕ್ಕೆ 13 ಸಾವಿರ ಜನ ಬಲಿ!

masthmagaa.com:

ಚೀನಾದಲ್ಲಿ ಕೋವಿಡ್‌ ಸೋಂಕಿನಿಂದ ಸಾವನ್ನಪ್ತಿರೋರ ಸಂಖ್ಯೆಯಲ್ಲಿ ಏರಿಕೆಯಾಗ್ತಿದೆ. ಜನವರಿ 13 ರಿಂದ 19ರ ನಡುವೆ ಅಂದ್ರೆ ಒಂದು ವಾರದ ಅವಧಿಯಲ್ಲಿ ಸುಮಾರು 13 ಸಾವಿರ ಜನ ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಅಂತ ಖುದ್ದು ಚೀನಾದ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್‌ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ 681 ರೋಗಿಗಳು ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. 11,977 ಜನ ಕೋವಿಡ್‌ ಜೊತೆ ಇತರ ಖಾಯಿಲೆಯಿಂದ ಮೃತಪಟ್ಟಿದ್ದಾರೆ ಅಂತ ಚೀನಾದ ಡಿಸೀಸ್‌ ಕಂಟ್ರೋಲ್‌ ಸೆಂಟರ್‌ ಮಾಹಿತಿ ನೀಡಿದೆ. ಇನ್ನು ಮನೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಈ ಅಂಕಿ ಅಂಶದಲ್ಲಿ ಸೇರಿಲ್ಲ… ಅಂದ್ರೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಿರೋ ಸಾಧ್ಯತೆ ಇದೆ ಅಂತ ಹೇಳಿದೆ. ಇತ್ತ ನಿನ್ನೆಯಷ್ಟೇ ಚೀನಾದಲ್ಲಿ ಹೊಸ ವರ್ಷ ಆಚರಣೆ ಆಗಿದೆ.ಇದರ ನಂತರ ಕೊವಿಡ್‌ ಪ್ರಕರಣಗಳು ಹೆಚ್ಚಾಗಿ ಹೊಸದಾಗಿ 36 ಸಾವಿರ ಜನರು ತಮ್ಮ ಪ್ರಾಣ ಕಳೆದುಕೊಳ್ಳೋ ಸಾಧ್ಯತೆ ಇದೆ ಅಂತ ಬ್ರಿಟನ್‌ನ ಏರ್‌ಫಿನಿಟಿ ಸಂಸ್ಥೆ ಅಂದಾಜು ಮಾಡಿದೆ.

-masthmagaa.com

Contact Us for Advertisement

Leave a Reply