ನಮ್ಮಲ್ಲಿ 2ನೇ ಅಲೆ, 3ನೇ ಅಲೆ.. ಚೀನಾದಲ್ಲಿ ಯಾವ ಅಲೆನೂ ಇಲ್ಲ ಯಾಕೆ?

masthmagaa.com:

ಭಾರತ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ, ಮೂರನೇ ಅಲೆ, ನಾಲ್ಕನೇ ಅಲೆ ಏಳುತ್ತಿದ್ರೆ.. ಕೊರೋನಾ ತವರು ಚೀನಾದಲ್ಲಿ ಯಾವ ಅಲೆನೂ ಇಲ್ವಲ್ಲಾ ಅನ್ನೋ ಪ್ರಶ್ನೆ ಸಾಕಷ್ಟು ಜನರಿಗೆ ಕಾಡ್ತಿದೆ. ಚೀನಾದಲ್ಲಿ ಕಳೆದ ವರ್ಷ ಒಂದನೇ ಅಲೆ ಎದ್ದು ಕಮ್ಮಿಯಾದ ಬಳಿಕ ಆಮೇಲೆ ಯಾವುದೇ ಅಲೆ ಏಳೇ ಇಲ್ಲ. ನಂತರದಲ್ಲಿ 200-300 ಕೇಸ್​ ದಾಟಿ ಹೋಗೇ ಇಲ್ಲ. ಕಳೆದ 24 ಗಂಟೆಗಳಲ್ಲಿ ಚೀನಾದಲ್ಲಿ ಕೇವಲ 15 ಕೇಸ್ ವರದಿಯಾಗಿದೆ. ಇನ್ನೊಂದು ವಿಚಾರ ಅಂದ್ರೆ ಚೀನಾದಲ್ಲಿ ರೋಗದ ಲಕ್ಷಣ ಇಲ್ಲದಿದ್ರೆ ಚೀನಾ ಸರ್ಕಾರ ಅದನ್ನ ಪಾಸಿಟಿವ್ ಕೇಸ್ ಅಂತ ಪರಿಗಣಿಸೋದೇ ಇಲ್ಲ. ಚೀನಾದಲ್ಲಿ ಇದುವರೆಗೆ 90,483 ಜನರಿಗೆ ಸೋಂಕು ದೃಢಪಟ್ಟಿದ್ದು.. 4,636 ಸೋಂಕಿತರು ಮೃತಪಟ್ಟಿದ್ದಾರೆ. ಚೀನಾದ್ಯಂತ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರೋರು ಕೇವಲ 309 ಜನ ಮಾತ್ರ.

-masthmagaa.com

Contact Us for Advertisement

Leave a Reply