ತೈವಾನ್‌ಗೆ ಶಸ್ತ್ರಾಸ್ತ್ರ ಪೂರೈಕೆ: US ಕಂಪನಿಗಳಿಗೆ ಚೀನಾ ಲಗಾಮು!

masthmagaa.com:

ತೈವಾನ್‌ ವಿಚಾರವಾಗಿ ಚೀನಾ‌ ಹಾಗೂ ಅಮೆರಿಕದ ನಡುವಿನ ಮುಸುಕಿನ ಕಾದಾಟ ಕಂಟಿನ್ಯೂ ಆದಂತೆ ಕಾಣಿಸ್ತಿದೆ. ಇದೀಗ ತೈವಾನ್‌ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡ್ತೀವೆ ಅಂತೇಳಿ ಅಮೆರಿಕದ ಎರಡು ಕಂಪನಿಗಳ ಮೇಲೆ ಚೀನಾ ನಿರ್ಬಂಧ ವಿಧಿಸಿದೆ. ಚೀನಾದಲ್ಲಿ ಕಾರ್ಯ ನಿರ್ವಹಿಸ್ತಿದ್ದ ಜನರಲ್‌ ಅಟಾಮಿಕ್ಸ್‌ ಏರೋನಾಟಿಕಲ್‌ ಸಿಸ್ಟಮ್ ಮತ್ತು ಜನರಲ್‌ ಡೈನಾಮಿಕ್ಸ್ ಲ್ಯಾಂಡ್‌ ಸಿಸ್ಟಮ್ಸ್‌ ಅನ್ನೊ ಎರಡು ಅಮೆರಿಕನ್ ಕಂಪನಿಗಳ ಮೇಲೆ ಚೀನಾ ನಿಷೇಧ ಹೇರಿದೆ. ಇತ್ತೀಚಿಗೆ ಯುಕ್ರೇನ್‌ ಜೊತೆಗಿನ ಯುದ್ದದಲ್ಲಿ ರಷ್ಯಾಗೆ ಸಪೋರ್ಟ್‌ ಮಾಡಿದ್ದ ಕಾರಣಕ್ಕಾಗಿ ಬೈಡನ್‌ ಸರ್ಕಾರ ಅಮೆರಿಕದಲ್ಲಿ ಚೀನಾದ 8 ಸೇರಿದಂತೆ ವಿವಿಧ ದೇಶಗಳ ಒಟ್ಟು 93 ಕಂಪನಿಗಳ ಮೇಲೆ ನಿರ್ಬಂಧ ಹೇರಿತ್ತು. ಅದ್ರ ಬೆನ್ನಲ್ಲೆ ಈಗ ಅಮೆರಿಕದ ಈ ಎರಡು ಕಂಪನಿಗಳು ಅಸ್ಪಷ್ಟ ಆಸ್ತಿಯನ್ನ ಹೊಂದಿವೆ. ಹಾಗೂ ಅವು ತೈವಾನ್‌ಗೆ ಶಸ್ತ್ರಾಸ್ತ್ರಗಳನ್ನ ಸಪ್ಲೈ ಮಾಡ್ತಿವೆ ಅಂತೇಳಿ ಚೀನಾ ಅವುಗಳನ್ನ ಬ್ಯಾನ್‌ ಮಾಡಿ ಅಮೆರಿಕಗೆ ಟಕ್ಕರ್‌ ಕೊಟ್ಟಿದೆ.

-masthmagaa.com

Contact Us for Advertisement

Leave a Reply